Breaking
4 Apr 2026, Sat

ಚಾರ್ಮಾಡಿ ಗ್ರಾಮದ ಕುಂಡೊಟ್ಟುಗೆ ಲೋಕೋಪಯೋಗಿ ಸಚಿವರ ಭೇಟಿ: ಸ್ಥಳೀಯರ ಅಹವಾಲು ಸ್ವೀಕಾರ

ಬೆಳ್ತಂಗಡಿ: ತಾಲೂಕಿನ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸಿದ್ದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರ ಮನವಿ ಮೇರೆಗೆ ಚಾರ್ಮಾಡಿ ಗ್ರಾಮದ ಕುಂಡೊಟ್ಟು ಪ್ರದೇಶಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯರು ಇಲ್ಲಿಯ ಕಿರು ಸೇತುವೆಯ ಬಗ್ಗೆ ಬೇಡಿಕೆನಿಟ್ಟರು. ಈ ಬೇಡಿಕೆಗೆ ಸಚಿವರು ಪೂರಕವಾಗಿ ಸ್ಪಂದಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ, ಸ್ಥಳೀಯರಾದ ಯಶೋಧರ್ ಚಾರ್ಮಾಡಿ, ಅಶ್ರಫ್ ನೆರಿಯ, ಪ್ರದೀಪ್ ಕೆ.ಸಿ. ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *