ಬಂಟ್ವಾಳ : ಕರ್ಪೆ ಗ್ರಾಮ ದೋಟ ಎಂಬಲ್ಲಿನ ಖ್ಯಾತ ಹೋಮಿಯೋಪತಿ ಹಾಗೂ ನಾಟಿ ವೈದ್ಯ ಡಾ. ರಾಮಾರಾಯ ಪ್ರಭು (ಪ್ರಾಯ 76)ರವರು ಅಲ್ಪಕಾಲದ ಅಸೌಖ್ಯ ದಿಂದ ದಿನಾಂಕ 07-12-2024 ರಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇವರು ಬಂಟ್ವಾಳ ತಾಲ್ಲೂಕಿನ ಸಂಗಬೆಟ್ಟು ಮಂಡಲ ಪಂಚಾಯತ್ ಸದಸ್ಯರು ಹಾಗೂ ಸಿದ್ದಕಟ್ಟೆ ಸಿ. ಎ. ಬ್ಯಾಂಕ್ ನಿರ್ದೇಶಕರಾಗಿ ಮತ್ತು ಕರ್ಪೆ ಗ್ರಾಮ ಶ್ರೀ ದೈವ ಕೊಡಮನಿತ್ತಾಯ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸ್ಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೊಸೆಯಂದಿರು ಅಳಿಯ ಸೇರಿದಂತೆ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.
ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು, ಮಾಜಿ ಅಧ್ಯಕ್ಷರ ಪದ್ಮರಾಜ್ ಬಲ್ಲಾಳ್ ಮಾವಂತುರು ಸಹಿತ ಇತರ ಎಲ್ಲಾ ನಿರ್ದೇಶಕರು ಮೃತರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.