ಬಂಟ್ವಾಳ: ಕಳೆದ 9 ವರ್ಷಗಳಿಂದ ಸಮಾಜಮುಖಿ ಸೇವಾ ಕಾರ್ಯವನ್ನು ಮಾಡುತ್ತಾ ಬಂದಿರುವ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ವತಿಯಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಪುಚ್ಚಾಜೆ ಆನಂದ ನಾಯ್ಕ್ ಮತ್ತು ಜಾಂಡೀಸ್, ಲಿವರ್ ಮತ್ತು ರಕ್ತನಾಳ ಸಮಸ್ಯೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ಕುಕ್ಕಿಪಾಡಿ, ಆರಂಬೋಡಿ ನಡ್ಯೋಡಿ ನಿವಾಸಿ ಮನೋಜ್. ಕೆ ಇವರ ವೈದ್ಯಕೀಯ ವೆಚ್ಚಕ್ಕಾಗಿ ತಲಾ 15,000 ರೂಪಾಯಿ ಹಾಗೂ ನರದ ಸಮಸ್ಯೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ದೇವಶ್ಯಪಡೂರು ಗ್ರಾಮದ ಅತ್ತಳಿಕೆ ಜಯ ನಾಯ್ಕ್ ಇವರ ವೈದ್ಯಕೀಯ ವೆಚ್ಚಕಾಗಿ 10,000 ರೂಪಾಯಿಯ ಧನ ಸಹಾಯವನ್ನು ಬಿ.ಸಿ.ರೋಡ್ ನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹಸ್ತಾಂತರ ಮಾಡಲಾಯಿತು.


ಈ ಸಂದರ್ಭದಲ್ಲಿ ಟ್ರಸ್ಟ್ ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.







