Breaking
19 Sep 2026, Sat

ಕರುನಾಡು ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ನೆರವು ಹಸ್ತಾಂತರ

ಬೆಳ್ತಂಗಡಿ: ಕರುನಾಡು ಚಾರಿಟೇಬಲ್ ಟ್ರಸ್ಟ್ (ರಿ), ಕರ್ನಾಟಕ ಇದರ 2026 ಮಾರ್ಚ್ ತಿಂಗಳ ಮಾಸಿಕ (07ನೇ) ಸೇವಾ ಯೋಜನೆಯ ಅಂಗವಾಗಿ ನೆರವು ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಬೆಳ್ತಂಗಡಿ ತಾಲೂಕಿನ ನೇತ್ರಬೈಲು ನಿವಾಸಿ ಸರೋಜಿನಿ ಅವರು ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು, ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ. ಇವರ ಮುಂದಿನ ಚಿಕಿತ್ಸೆಗೆ ಮಾಸಿಕ ಸೇವಾ ಯೋಜನೆಯಡಿ ₹10,000/- ಧನ ಸಹಾಯವನ್ನು ಮಾ. 29 ರಂದು ಶ್ರೀ ಕೊಡಮಣಿತ್ತಾಯ, ಪಡ್ತ್ರಾವಂಡಿ ಕ್ಷೇತ್ರ, ಬದಿನಡೆ (ಮುಗೇರಡ್ಕ ಗರ್ಡಾಡಿ) ಇಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ಎಲ್ಲಾ ಸೇವಾ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *