Breaking
30 Mar 2026, Mon

ಶ್ರೀ ನಡಿಯೇಳು ದೈವಂಗಳು, ಶ್ರೀ ಉಳ್ಳಾಲ್ತಿ, ಶ್ರೀ ನಾಲ್ಕೈತ್ತಾಯ ಕ್ಷೇತ್ರವಾದ ಸಜೀಪ ಮಾಗಣೆ ಅಗರಿ ಮಾಡ ಆಲಾಡಿ ಖಾನದಲ್ಲಿ ಬ್ರಹ್ಮಕಲಶ ಉತ್ಸವ

ಬಂಟ್ವಾಳ: ಶ್ರೀ ನಡಿಯೇಳು ದೈವಂಗಳು, ಶ್ರೀ ಉಳ್ಳಾಲ್ತಿ, ಶ್ರೀ ನಾಲ್ಕೈತ್ತಾಯ ಕ್ಷೇತ್ರ, ಸಜೀಪ ಮಾಗಣೆ ಅಗರಿ ಮಾಡ ಆಲಾಡಿ ಖಾನದಲ್ಲಿ ಬ್ರಹ್ಮಕಲಶ ಉತ್ಸವವು ನಡೆಯಲಿದೆ.

ನೂತನವಾಗಿ ಶಿಲಾಮಯ ನಿರ್ಮಾಣ ಹಾಗೂ ತಾಮ್ರದ ಹೊದಿಕೆಯೊಂದಿಗೆ, ವಾಸ್ತು ಪ್ರಕಾರ ತೀರ್ಥಭಾವಿ ಸುತ್ತು ಪ್ರಾಕಾರ ರಚಿಸಿದ್ದು ಈ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಕೆ. ಉಚ್ಚಿಲತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಹಾಗೂ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ನೆರವೇರಲಿದೆ.

ಎ. 02 ಗುರುವಾರದಂದು ಪ್ರಾರ್ಥನೆ, ಪುಣ್ಯಾಹ, ಪಂಚಗವ್ಯ ವಾಸ್ತು ಪೂಜೆ, ರಕ್ಷೋಘ್ನ ಹೋಮ, ಸುದರ್ಶನ ಹೋಮ, ಅಧಿವಾಸ, ಪ್ರಾಯಶ್ಚಿತ್ತ ಹೋಮ, ಅನ್ನದಾನ ನಡೆಯಲಿದೆ.

ಎ. 03 ಶುಕ್ರವಾರದಂದು ಬೆಳಿಗ್ಗೆ ಆದ್ಯ ಗಣಯಾಗ, ಕಲಶ ಪೂಜೆ, ಪ್ರತಿಷ್ಠಾ ಹೋಮ, ಶಾಂತಿ ಹೋಮ, ಪುನಃ ಪ್ರತಿಷ್ಠೆ, ಬ್ರಹ್ಮಕಲಶ ಅಭಿಷೇಕ, ಪರ್ವ ಸೇವೆ, ಪಲ್ಲಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ.

ಈ ಬ್ರಹ್ಮಕಲಶೋತ್ಸವಕ್ಕೆ ಎಲ್ಲರೂ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *