Breaking
30 Mar 2026, Mon

ಯುವವಾಹಿನಿ( ರಿ.) ಮಾಣಿ ಘಟಕದ ಪದಗ್ರಹಣ ಸಮಾರಂಭ

ಪಾಶ್ಚಿಮಾತ್ಯ ಸಂಸ್ಕೃತಿಯಿಂದ ದಿಕ್ಕು ತಪ್ಪಿದ ಯುವಕರನ್ನು ಸರಿದಾರಿಗೆ ತರಬೇಕು: ಕುಮಾರಚಂದ್ರ

ಕಲ್ಲಡ್ಕ : ಯುವ ಜನತೆ ಪಾಶ್ಚಿಮಾತ್ಯ ಸಂಸ್ಕೃತಿಯಿಂದಾಗಿ ದಿಕ್ಕು ತಪ್ಪಿದ್ದು, ಅಂಥವರನ್ನು ಸರಿ ಮಾಡುವ ಉತ್ತಮ ಕೆಲಸ ಯುವವಾಹಿನಿ ಸಂಘಟನೆಯ ಮೂಲಕ ಆಗಬೇಕು ಎಂದು ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ ಕಾರವಾರ ಹೇಳಿದರು.
ಅವರು ಮಾ. 29 ರಂದು ಮಾಣಿ ಕೊಡಾಜೆಯ ನಕ್ಷತ್ರ ಅಡಿಟೋರಿಯಂನಲ್ಲಿ ನಡೆದ ಯುವವಾಹಿನಿ( ರಿ.) ಮಾಣಿ ಘಟಕದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಶಿವರಾಜ್ ಪಿ ಆರ್ ವಹಿಸಿದ್ದರು.
ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ರವರು ಗಣೇಶ್ ಪೂಜಾರಿ ಕೊಡಾಜೆ ನೇತೃತ್ವದ ನೂತನ ಸಮಿತಿಗೆ ಪದಪ್ರಧಾನ ನೆರವೇರಿಸಿ ಶುಭ ಹಾರೈಸಿದರು.

ಹೆಚ್ಚುವರಿ ಅಡ್ವೋಕೇಟ್ ಜನರಲ್,ಕರ್ನಾಟಕ. ತಾರನಾಥ ಪೂಜಾರಿ ಇರುವೈಲ್ ರವರು ಡಾ. ತ್ರಿವೇಣಿ ರಮೇಶ್ ಸಂಪಾದಕದಲ್ಲಿ ಮೂಡಿಬಂದ ಮಾಣಿಕ್ಯ ವಿಶೇಷಾಂಕವನ್ನು ಬಿಡುಗಡೆಗೊಳಿಸಿದರು.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಮಂಗಳೂರು ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ ಜೈ ತುಳುನಾಡು (ರಿ.) ಬಂಟ್ವಾಳ ಎಗ್ಗೆಗೆ ಯುವವಾಹಿನಿ ಮಾಣಿ ಘಟಕದ “ಸಾಧನ ಪುರಸ್ಕಾರ ” ನೀಡಿ ಶುಭ ಹಾರೈಸಿದರು.

ಈ ವೇಳೆ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ ಭೂ ದಾಖಲೆಗಳ ಉಪನಿರ್ದೇಶಕರಾದ ಪುಷ್ಪರಾಜ್ ಪೂಜಾರಿ ವಿದ್ಯಾರ್ಥಿ ವೇತನ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಯುವ ವಾಹಿನಿ ಮಾಣಿ ಘಟಕದ ವೃತ್ತಿ ನಿರತ ಶಿಕ್ಷಕ ಸದಸ್ಯರಿಗೆ “ಅಕ್ಷರ ಪುರಸ್ಕಾರ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಧ್ಯಕ್ಷ ಶಿವರಾಜ್ ಪಿಆರ್ ತನ್ನ ಅಧ್ಯಕ್ಷತೆ ಅವಧಿಯಲ್ಲಿ ಸಹಕರಿಸಿದ ಕಾರ್ಯಕಾರಿ ಸಮಿತಿಯ ಸದಸ್ಯರುಗಳನ್ನು ಗೌರವಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್, ಐ ಎಂ ಎ ಮಂಗಳೂರು ಅಧ್ಯಕ್ಷ ಡಾಕ್ಟರ್ ಸದಾನಂದ ಪೂಜಾರಿ, ವಕೀಲ ರಂಜಿತ್ ಪೂಜಾರಿ ಮೈರ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸೋಮ ಸುಂದರ್ ಸಾಲಿಯಾನ್, ಮಾಣಿ ಘಟಕದ ಕಾರ್ಯದರ್ಶಿ ದೀಪಕ್ ಪೆರಾಜೆ ಉಪಸ್ಥಿತರಿದ್ದರು.

ಶ್ರೇಯ ಸಿಂಧು ಸೃಷ್ಟಿ ಪ್ರಾರ್ಥಿಸಿ, ಸಚಿನ್ ಪೆರಾಜೆ ಸ್ವಾಗತಿಸಿದರು, ದೀಪಕ್ ಪೆರಾಜೆ ವಾರ್ಷಿಕ ವರದಿ ವಾಚಿಸಿ, ನಾಗೇಶ್ ಕೊಂಕಣಪದವು ನೂತನ ಸಮಿತಿಯ ಪಟ್ಟಿ ವಾಚಿಸಿದರು. ವಿಶ್ವನಾಥ ಊರ್ದಿಲ ವಂದಿಸಿದರು. ರಾಜೇಶ್ ಬಲ್ಯ ಹಾಗೂ ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.
ಪದಗ್ರಹಣ ಕಾರ್ಯಕ್ರಮದ ಮೊದಲು ತ್ರಿನೇತ್ರ ಕಲಾವಿದರು ಕುಡ್ಲ ಇವರಿಂದ ಬ್ರಹ್ಮರಕ್ಕಸೆ ತುಳು ನಾಟಕ ಪ್ರದರ್ಶನಗೊಂಡಿತು.

ಪದಗ್ರಹಣಗೊಂಡ ನೂತನ ಸಮಿತಿ ಅಧ್ಯಕ್ಷರಾಗಿ ಗಣೇಶ್ ಪೂಜಾರಿ ಕೊಡಾಜೆ ಪ್ರಥಮ, ಉಪಾಧ್ಯಕ್ಷರಾಗಿ ಸುಜಿತ್ ಅಂಚನ್ ಮಾಣಿ , ಎರಡನೇ ಉಪಾಧ್ಯಕ್ಷರಾಗಿ ಸತೀಶ್ ಕೊಪ್ಪರಿಗೆ ಕಾರ್ಯದರ್ಶಿಯಾಗಿ ವಿಶ್ವನಾಥ ಉರ್ದಿಲ, ಜತೆ ಕಾರ್ಯದರ್ಶಿಯಾಗಿ ಶಶಿಪ್ರಭಾ ಮಿತ್ತೂರು, ಕೋಶಾಧಿಕಾರಿಯಾಗಿ ತ್ರಿವೇಣಿ ರಮೇಶ್ ಮುಜಲ,ಸಾಂಸ್ಕೃತಿಕ ನಿರ್ದೇಶಕರಾಗಿ ಕೃಪಾನ್ ಪುತ್ತೂರು,ನಾರಾಯಣ ಗುರು ತತ್ವ ನಿರ್ದೇಶಕರಾಗಿ ಶ್ರೀಧರ್ ಮುಜಲ,ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಸತೀಶ್ ಮುರುವ, ಸಾಹಿತ್ಯ ಮತ್ತು ಕಲೆ ನಿರ್ದೇಶಕರಾಗಿ ರಾಜೇಶ್ ಕೋಟ್ಯಾನ್,ಕ್ರೀಡಾ ಕಾರ್ಯದರ್ಶಿಯಾಗಿ ಸಂದೇಶ್ ಕಡೇಶ್ವಾಲ್ಯ, ಆರೋಗ್ಯ ನಿರ್ದೇಶಕರಾಗಿ ರತಿ ಸುರ್ಲಾಜೆ,ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ಕೇಶವ ಬರಿಮಾರ್,ಸಮಾಜ ಸೇವಾ ನಿರ್ದೇಶಕರಾಗಿ ಸುರೇಶ್ ಬಾಕಿಲ,ಪ್ರಚಾರ ನಿರ್ದೇಶಕರಾಗಿ ಚರಣ್ ಜೆ ಅನಂತಾಡಿ,ಮಹಿಳಾ ನಿರ್ದೇಶಕರಾಗಿ ಪುಷ್ಪಶ್ರೀ ನಾಗೇಶ್,ವಿದ್ಯಾರ್ಥಿ ಸಂಘಟನೆನಿರ್ದೇಶಕರುಗಳಾಗಿ ಯಶಸ್ವಿನಿ, ಶ್ರೇಯ, ಭವಿಷ್ಯ ಬಾಕಿಲ,ಸಂಘಟನಾ ಕಾರ್ಯದರ್ಶಿಗಳಾಗಿ ಅನಂತಾಡಿಗೆ ಸೀತಾಲಕ್ಷ್ಮಿ, ಸುಜೀತ್ ಬಾಕಿಲ, ಮಾಣಿಗೆ ಸ್ಮಿತಾ ಹಳೀರ, ಗಂಗಾಧರ್ ಮಾಣಿ ಬರಿಮಾರ್ ಗೆ ಸಾಯಿ ಪ್ರಣಾಮ್, ಭರತ್ ಕೇವ, ರಾಮಣ್ಣ, ನೆಟ್ಲಾ ಮೂಡ್ನೂರುಗೆ ಪ್ರಸಾದ್ ಮಿತ್ತಕೋಡಿ, ಮೋಹನ್ ಮುಜಲ,ಪೆರಾಜೆಗೆ ಲೋಹಿತ್ ಮಡಲ, ಸುಕೇಶ್ ಬಡೇಕೋಡಿ ಕೆದಿಲಕ್ಕೆ ಬಾಲಕೃಷ್ಣ ಕೆರೆಕೋಡಿ, ನಿತಿನ್ ಅಂಗರಾಜೆ,ಇಡ್ಕಿದುಗೆ ನವೀನ್ ಸೂರ್ಯ, ರೇಖಾ ಇಡ್ಕಿದು, ಬಿಳಿಯೂರುಗೆ ವಿಕ್ರಮ್ ಬಿಳಿಯೂರು, ಚೇತನ್ ಮಲ್ಲಡ್ಕ,ಪೆರ್ನೆಗೆ ಅಮಿತಾ ಪೆರ್ನೆ, ಶುಭ ಪೆರ್ನೆ,ಕಡೇಶ್ವಾಲ್ಯಕ್ಕೆ ಯಶೋಧ, ಶಿವಾನಿ, ಸಲಹೆಗಾರರಾಗಿ ಲೋಕನಾಥ್ ತಿಮರಾಜೆ ಆಯ್ಕೆ ಗೊಂಡರು.

Leave a Reply

Your email address will not be published. Required fields are marked *