ಬಂಟ್ವಾಳ: ಬಿ.ಸಿ ರೋಡಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಶ್ರೀ ರಾಮನವಮಿ ಅಂಗವಾಗಿ ನಡೆದ ಭಜನಾ ಕಾರ್ಯಕ್ರಮವು ಭಕ್ತಿಭಾವದಿಂದ ಜರುಗಿತು.

ಈ ಭಜನಾ ಕಾರ್ಯಕ್ರಮದಲ್ಲಿ ‘ಕೂಟ ಮಹಾ ಜಗತ್ತು’ ಬಂಟ್ವಾಳ ಅಂಗ ಸಂಸ್ಥೆಯ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು.

ಕಾರ್ಯಕ್ರಮದಲ್ಲಿ ಭಕ್ತರು ಭಜನೆಗಳಲ್ಲಿ ತೊಡಗಿ ಭಕ್ತಿರಸದಲ್ಲಿ ಮಿಂದೇಳಿದರು. ಸ್ಥಳೀಯ ಭಕ್ತರು ಹಾಗೂ ಭಜನಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.






