Breaking
25 Sep 2026, Fri

1200 ಲೀಟರ್ ಅಕ್ರಮ ಸ್ಪಿರಿಟ್ ಸಾಗಾಟ: ಇಬ್ಬರು ಬಂಧನ

ಕಾಸರಗೋಡು: ಸುಮಾರು 1200 ಲೀಟರ್‌ ಸ್ಪಿರಿಟ್ ಅನ್ನು ಅಕ್ರಮವಾಗಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕಾಸರಗೋಡಿನ ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಜೇಶ್ವರ ಕುಂಜತ್ತೂರಿನ ಗಿರೀಶ್ (39) ಹಾಗೂ ತೃಶ್ಯೂರಿನ ಎ. ಎಚ್ ಅನ್ಸಿಫ್ (40) ಎಂದು ಗುರುತಿಸಲಾಗಿದೆ.

ಅಕ್ರಮವಾಗಿ ಕಾರಿನಲ್ಲಿ ಸ್ಪಿರಿಟನ್ನು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಮಂಜೇಶ್ವರ ಬಳಿ ಸ್ಕಾರ್ಫಿಯೋ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಸ್ಪಿರಿಟ್ ಪತ್ತೆಯಾಗಿದೆ.

ಒಟ್ಟು 34 ಕ್ಯಾನ್‌ಗಳಲ್ಲಿ ಸುಮಾರು 1200 ಲೀಟರ್ ಸ್ಪಿರಿಟ್ ಸಾಗಿಸಲಾಗುತ್ತಿತ್ತು. ಈ ಕೃತ್ಯಕ್ಕೆ ಒಟ್ಟು ಮೂರು ಕಾರುಗಳನ್ನು ಬಳಸಲಾಗುತ್ತಿದ್ದು, ಈ ವೇಳೆ ಎರಡು ಕಾರುಗಳು ತಪ್ಪಿಸಿಕೊಂಡು ಪರಾರಿಯಾಗಿವೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *