ಬಂಟ್ವಾಳ: ಶ್ರೀ ರಾಮ ಭಜನಾ ಸೇವಾ ಟ್ರಸ್ಟ್ (ರಿ.) ರಾಮನಗರ ತುಂಬೆಯ ಶ್ರೀ ರಾಮ ಭಜನಾ ಮಂದಿರದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ಏಕಾಹ ಭಜನೋತ್ಸವವು ಭಕ್ತಿಭಾವದಿಂದ ನಡೆಯಲಿದೆ.

ಏಕಾಹ ಭಜನೋತ್ಸವವು ಮಾ. 26ನೇ ಗುರುವಾರ ಸೂರ್ಯೋದಯದಿಂದ ಪ್ರಾರಂಭಗೊಂಡು, ಮಾ. 27ನೇ ಶುಕ್ರವಾರದ ಸೂರ್ಯೋದಯದವರೆಗೆ ನಡೆಯಲಿದೆ.

ಮಾರ್ಚ್ 26ರಂದು ಬೆಳಿಗ್ಗೆ 8 ಗಂಟೆಗೆ ಗಣಹೋಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದ್ದು ಅದೇ ದಿನ ರಾತ್ರಿ 12 ಗಂಟೆಗೆ ಮಹಾಪೂಜೆ ನಡೆದು ಬಳಿಕ ಪ್ರಸಾದ ವಿತರಣೆ ನಡೆಯಲಿದೆ.



ಮಧ್ಯಾಹ್ನ 12 ಗಂಟೆಗೆ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.

ಅದೇ ದಿನ ಸಂಜೆ 6.30ಕ್ಕೆ ನಗರ ಭಜನೆ ಶ್ರೀ ರಾಮ ಭಜನಾ ಮಂದಿರದಿಂದ ಪ್ರಾರಂಭವಾಗಿ ಬಂಟ್ವಾಳ ಪೇಟೆ, ಮಹಾಲಿಂಗೇಶ್ವರ ದೇವಸ್ಥಾನ, ತಿರುಮಲ ವೆಂಕಟರಮಣ ದೇವಸ್ಥಾನ ಹಾಗೂ ತ್ಯಾಗರಾಜ ರಸ್ತೆಯ ಮೂಲಕ ಬಂಟ್ವಾಳ ಬಡ್ಡಕಟ್ಟೆಯ ಹನುಮಾನ್ ದೇವಸ್ಥಾನ ತಲುಪಿ, ಭದ್ರಕಾಳಿ ಕಟ್ಟೆಯಿಂದ ಮತ್ತೆ ಮಂದಿರಕ್ಕೆ ಹಿಂತಿರುಗಲಿದೆ.

ಇನ್ನೂ, ಮಾರ್ಚ್ 20ರಿಂದ 26ರವರೆಗೆ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ನಗರ ಭಜನೆ ನಡೆಯಲಿದೆ.
ಮಾ. 25ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವೂ ಪ್ರದರ್ಶನಗೊಳ್ಳಲಿದೆ.

ಭಕ್ತಾಧಿಗಳು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


