Breaking
25 Sep 2026, Fri

ಎಲೆಕ್ಟ್ರಿಕ್ ಟ್ರಾನ್ಸ್‌ಫಾರ್ಮರ್ ನಿಂದ ಹೊರಬಂದ ಕಿಡಿ: ಟೈರ್ ಅಂಗಡಿ ಸುಟ್ಟು ಭಸ್ಮ

ಉಡುಪಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಹೆಜಮಾಡಿ ಟೋಲ್ ಪ್ಲಾಜಾ ಸಮೀಪದಲ್ಲಿರುವ ಟೈರ್ ಪಂಕ್ಚರ್ ದುರಸ್ತಿ ಅಂಗಡಿ ಸುಟ್ಟು ಭಸ್ಮವಾದ ಘಟನೆ ಮಾ. 22 ರಂದು ನಡೆದಿದೆ.

ಅಂಗಡಿಯ ಪಕ್ಕದಲ್ಲಿರುವ ಎಲೆಕ್ಟ್ರಿಕ್ ಟ್ರಾನ್ಸ್‌ಫಾರ್ಮರ್‌ನಿಂದ ಹೊರಬಂದ ಕಿಡಿಗಳು ಒಣ ಹುಲ್ಲಿಗೆ ತಗುಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ, ಬಿಹಾರ ಮೂಲದ ಸೈಫುಲ್ಲಾ ಅವರಿಗೆ ಸೇರಿದ ಅಂಗಡಿಗೆ ತಗುಲಿದೆ. ಬೆಂಕಿಯ ತೀವ್ರತೆಗೆ ಅಂಗಡಿಯಲ್ಲಿದ್ದ ಕಂಪ್ರೆಸರ್, ಜನರೇಟರ್, ಟೂಲ್ ಕಿಟ್‌ಗಳು ಹಾಗೂ ಸಂಗ್ರಹಿಸಿಟ್ಟಿದ್ದ ಟೈರ್‌ಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.

ಘಟನೆ ನಡೆದ ತಕ್ಷಣ ಸ್ಥಳೀಯ ನಿವಾಸಿಗಳು ಮತ್ತು ಪಡುಬಿದ್ರಿ ಪೊಲೀಸರು ನೀರು ಹಾರಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ನಂತರ ಘಟನಾ ಸ್ಥಳಕ್ಕೆ ಧಾವಿಸಿದ ಉಡುಪಿಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *