ಬಂಟ್ವಾಳ: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಳ್ಯದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಬೊಂಡಾಲ ಶಾಂತಿಗುಡ್ಡೆ ನಿವಾಸಿ ತಿಲಕ್ ರಾಜ್ ಎಂದು ಗುರುತಿಸಲಾಗಿದೆ. ಇಂಟಿರಿಯರ್ ಕೆಲಸಗಾರನಾಗಿರುವ ತಿಲಕ್ ರಾಜ್ ಅವರು ಅತ್ಯಂತ ಮೃದುಸ್ವಭಾವದ ವ್ಯಕ್ತಿಯಾಗಿದ್ದರು.

ಮಾ.20 ರಂದು ಸಂಜೆ ಸುಳ್ಯದಲ್ಲಿ ಕೆಲಸ ಇದೆ ಎಂದು ಹೇಳಿ ಮನೆ ಬಿಟ್ಟ ಅವರು, ಬಳಿಕ ಸುಳ್ಯದ ಆರಂತೋಡು ಪ್ರದೇಶದಲ್ಲಿರುವ ಪಯಸ್ವಿನಿ ಹೋಮ್ ಸ್ಟೇಯಲ್ಲಿ ಬಾಡಿಗೆಗೆ ಕೊಠಡಿ ಪಡೆದಿದ್ದರು. ಹೋಮ್ ಸ್ಟೇಯಲ್ಲಿಯೇ ಇರುವ ಹೋಟೆಲ್‌ನಲ್ಲಿ ಚಹಾ ಕುಡಿದು ಬಳಿಕ ಕೊಠಡಿಗೆ ತೆರಳಿದ್ದರು.

ಮಧ್ಯರಾತ್ರಿ ವರೆಗೆ ತಮ್ಮ ಆತ್ಮೀಯ ಸ್ನೇಹಿತನ ಮೊಬೈಲ್‌ಗೆ ವಾಯ್ಸ್ ಮೆಸೇಜ್‌ಗಳನ್ನು ಕಳುಹಿಸಿ, ಹಣಕಾಸು ವಿಚಾರ ಸೇರಿದಂತೆ ಹಲವಾರು ವಿಷಯಗಳನ್ನು ತಿಳಿಸಿದ್ದಾರೆ. ತಾನು ದೂರ ಹೋಗುತ್ತಿರುವುದಾಗಿ ತಿಳಿಸಿ, “ನನ್ನನ್ನು ಹುಡುಕಬೇಡಿ” ಎಂಬುದಾಗಿ ಸಂದೇಶದಲ್ಲಿ ಹೇಳಿದ್ದಾರೆ. ಜೊತೆಗೆ ತಾನಿರುವ ಸ್ಥಳದ ಲೊಕೇಶನ್‌ನ್ನೂ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಸ್ನೇಹಿತನು ಆ ಸಂದೇಶಗಳನ್ನು ಮರುದಿನ ಬೆಳಿಗ್ಗೆ ಗಮನಿಸಿದ್ದು, ಅಷ್ಟರಲ್ಲೇ ದುರಂತ ಸಂಭವಿಸಿತ್ತು ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡ





