ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲ್ಲಿನ ಕೋರೆಗಳಲ್ಲಿ ಸಿಗಬಹುದಾದ ಖನಿಜ ಸಂಪತ್ತು , ಎಂ.ಸ್ಯಾಂಡ್ ಜಿಲ್ಲೆಯ ಕಲ್ಲಿನ ಕೋರೆಗಳಿಂದ ಹೇರಳವಾಗಿ ನೇರವಾಗಿ ಕೇರಳ ರಾಜ್ಯಕ್ಕೆ ಪರವಾನಿಗೆ ಮೂಲಕ ಸಾಗಾಟವಾಗುತ್ತಿರುವುದರಿಂದ ಕರಾವಳಿಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೆ ಹಾಗೂ ಖಾಸಗಿ ನಿರ್ಮಿತ ವಾಣಿಜ್ಯ ಕಟ್ಟಡಗಳಿಗೆ ,ಗೃಹ ನಿರ್ಮಾಣಗಳಿಗೆ ಎಂ.ಸ್ಯಾಂಡ್ ನ ಕೊರತೆಯಾಗುತ್ತಿದೆ . ಇದರಿಂದಾಗಿ ಜಿಲ್ಲೆಯಲ್ಲಿನ ರಸ್ತೆ ಕಾಮಗಾರಿಗಳು ಸೇರಿದಂತೆ ಇತರ ಕಟ್ಟಡ ನಿರ್ಮಾಣ ಕೆಲಸ ಕಾರ್ಯಗಳು ಕುಂಠಿತಗೊಂಡಿವೆ ಹಾಗೂ ಕೇರಳ ರಾಜ್ಯದವರು ಅತೀ ಹೆಚ್ಚಿನ ಬೆಲೆಯನ್ನು ನೀಡುತ್ತಿರುವುದರಿಂದ ಇಲ್ಲಿನ ಎಂ.ಸ್ಯಾಂಡ್ ಬಹುಪಾಲು ಕೇರಳ ಪಾಲಾಗುತ್ತಿದೆ ಮತ್ತು ಎಂ.ಸ್ಯಾಂಡ್ ನ ಬೆಲೆಯು ಗಣನೀಯವಾಗಿ ಏರಿಸಲಾಗಿದೆ ಎಂದೂ ಸಾರ್ವಜನಿಕರು ಜಿಲ್ಲಾಡಳಿತವನ್ನು ದೂರುತ್ತಿದ್ದಾರೆ .

ಜಿಲ್ಲೆಯಲ್ಲಿ 1 ಲೋಡು ಮರಳಿಗಾಗಿ ಢಕ್ಕೆಯಲ್ಲಿ ಲಾರಿ ವಾಹನವು ಸರದಿ ಸಾಲಿನಲ್ಲಿ 1 ರಿಂದ 2ದಿನ ಕಾಯಬೇಕಾಗುತ್ತದೆ. ಮರಳಿನ ಬೆಲೆಯು ಢಕ್ಕೆಯಲ್ಲಿಯೇ ಪರವಾನಿಗೆ ಸಹಿತ 14 ಸಾವಿರಕ್ಕೆ ಏರಿಕೆಯಾಗಿದೆ. ಬಡವರು ಒಂದು ಲೋಡ್ ಮರಳಿಗೆ 18 ಸಾವಿರದಿಂದ 24 ಸಾವಿರ ತೆರಬೇಕಾಗಿದೆ. ಹಾಗೆಯೇ 3 ಯೂನಿಟ್ ಎಂ. ಸ್ಯಾಂಡ್ ಗೆ ಜಲ್ಲಿ ಕೊರೆಯಲ್ಲಿ 12000 ರೂ ವರೆಗೆ ಬೆಲೆ ಕೊಟ್ಟು ಖರೀದಿ ಮಾಡಲಾಗುತ್ತದೆ.

ಈ ಎಲ್ಲಾ ಹಿನ್ನಲೆಯಲ್ಲಿ ದ.ಕನ್ನಡ ಜಿಲ್ಲೆಯಲ್ಲಿ ಮರಳು ಇರುವ ಎಲ್ಲಾ ಕಡೆಗಳಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿ ಪರವಾನಿಗೆ ನೀಡಬೇಕು ಹಾಗೂ ಎಂ.ಸೆಂಡ್ ನ್ನು ಕೇರಳ ರಾಜ್ಯಕ್ಕೆ ಪರವಾನಿಗೆ ನೀಡದಂತೆ ಹಾಗೂ ಬೆಲೆ ಏರಿಕೆ ಮಾಡದಂತೆ ಸೂಕ್ತ ನಿರ್ದೇಶನ ನೀಡಬೇಕೆಂದು ಬಂಟ್ವಾಳ ತಾಲೂಕು ಪಂಚಾಯತ್ ನ ಮಾಜಿ ಸದಸ್ಯರಾದ ಪ್ರಭಾಕರ ಪ್ರಭು ಅವರು ಮಾನ್ಯ ಜಿಲ್ಲಾಧಿಕಾರಿಯವರಿಗೆ ಈ ಮೂಲಕ ವಿನಂತಿಸಿಕೊಂಡಿದ್ದಾರೆ .

ಪ್ರತಿ:
1) ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಪ್ರಜಾಸೌಧ” ಜಿಲ್ಲಾಧಿಕಾರಿ ಕಛೇರಿ ಮಂಗಳೂರು(ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲು ವಿನಂತಿ )










