ಬಂಟ್ವಾಳ: ತಾಲೂಕು ಸಂಗಬೆಟ್ಟು ಗ್ರಾಮ ಪಂಚಾಯತ್ 4 ನೇ ವಾರ್ಡ್ ಗ್ರಾಮ ಪಂಚಾಯತ್ ಸದಸ್ಯರಾದ ಸುನೀಲ್ ಶೆಟ್ಟಿಗಾರ್ ತಾನು ಚುನಾಯಿತನಾದ ದಿನದಿಂದ ಹಿಡಿದು ಸದಸ್ಯ ಅವದಿ ಮುಗಿಯುವ ತನಕ ಇಡೀ ವಾರ್ಡ್ ವ್ಯಾಪ್ತಿಯಲ್ಲಿ ಓಡಾಡಿಕೊಂಡು ಮನೆ ಮನೆ ಸಂಪರ್ಕ ಮಾಡಿ ವಾರ್ಡ್ ನಲ್ಲಿ ಇರುವ ಸಾರ್ವಜನಿಕ ಸಮಸ್ಯೆಗಳು, ವೈಯಕ್ತಿಕ ಸಮಸ್ಯೆಗಳು, ವಾರ್ಡ್ ಮತದಾರರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಮತದಾರರ ಸುಖ ದುಃಖಗಳಲ್ಲಿ ಭಾಗಿಯಾಗಿ ಪ್ರತಿಯೊಂದು ಸಮಸ್ಯೆ ಗಳಿಗೆ ಪರಿಹಾರ ಹುಡುಕಿಕೊಂಡು ನಿತ್ಯ ನಿರಂತರ ಜನರ ಮದ್ಯೆ ಇದ್ದುಕೊಂಡು ತನ್ನ ವಾರ್ಡ್ ಸಂಗಬೆಟ್ಟು ಬಾಕಿಮಾರ್ ನಲ್ಲಿರುವ ಹಳೆಯ ಅಂಗನವಾಡಿ ಕಟ್ಟಡವನ್ನು ತೆಗೆದು ಗ್ರಾಮ ಪಂಚಾಯತ್ ನ ಉದ್ಯೋಗ ಖಾತ್ರಿ ಯೋಜನೆ ಹಾಗೂ ಇತರ ಮೂಲಗಳಿಂದ ಅನುದಾನ ಕ್ರೋಡಿಕರಿಸಿ ಮಾದರಿ ಅಂಗನವಾಡಿ ಕೇಂದ್ರ ನಿರ್ಮಾಣದಲ್ಲಿ ಸಂಪೂರ್ಣ ಸಹಕರಿಸಿದ ಸುನೀಲ್ ಶೆಟ್ಟಿಗಾರ್ ರವರನ್ನು ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ವಾರ್ಡ್ ಸದಸ್ಯರೆಲ್ಲರೂ ಸೇರಿ ಗೌರವಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮುಮ್ತಾಜ್ ಎಚ್ ಟಿ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಭವ್ಯಶ್ರೀ, ಮುಖ್ಯ ಅತಿಥಿಗಳಾದ ಸಿದ್ದಕಟ್ಟೆ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ನಿವೃತ ಶಿಕ್ಷಕ ದಾಮೋದರ ರಾವ್,ಉದ್ಯಮಿ ನಾರಾಯಣ ಪೂಜಾರಿ, ಸಿದ್ದಕಟ್ಟೆ ಸಿ ಎ ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಉಮೇಶ್ ಕಿರಣ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಾ ನಾಯ್ಕ್, ಕಾರ್ಯದರ್ಶಿ ರೋಹಿಣಿ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಶಾರದಾ, ಸಹಾಯಿಕಿ ಸವಿತಾ, ಪ್ರಭಾಕರ ಗಾಡಿಪಾಲ್ಕೆ , ಸಂಗಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ಮಾಜಿ ಉಪಾಧ್ಯಕ್ಷರಾದ ಸುರೇಶ ಕುಲಾಲ್, ವಿಮಲಾ ಮೋಹನ್ , ಜಲಜ ಹರೀಶ್ ಕುಂದರ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸಂದೇಶ ಶೆಟ್ಟಿ ಪೂಡುಂಬ,ಉದಯ ಪೂಜಾರಿ, ದಾಮೋದರ ಪೂಜಾರಿ, ಮಾದವ ಶೆಟ್ಟಿಗಾರ್,ಪ್ರೇಮಾ ಪ್ರಮುಖರಾದ ಶ್ರೀಪ್ರಕಾಶ್ ಜೈನ್, ದೇವರಾಜ್ ಸಾಲಿಯಾನ್, ವಿಶ್ವನಾಥ್ ಶೆಟ್ಟಿಗಾರ್, ನವೀನ ಹೆಗ್ಡೆ, ಚಂದ್ರಹಾಸ್ ಶೆಟ್ಟಿಗಾರ್, ಭೋಜ ಶೆಟ್ಟಿಗಾರ್, ಲೋಕೇಶ್ ಪೂಜಾರಿ, ಯಶೋದರ ಶೆಟ್ಟಿಗಾರ್, ರೋಹಿತ್, ಉದಯ ಶೆಟ್ಟಿಗಾರ್, ಉಮೇಶ್ ಗೌಡ, ದೀಪಕ್ ಶೆಟ್ಟಿಗಾರ್, ಅಂಗನವಾಡಿ ಮೇಲ್ವಿಚಾರಕಿಯರಾದ ನೀತಾ, ಶಾಲಿನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜ್ವಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.












