Breaking
6 Mar 2026, Fri

ಶ್ರೀ ರಾಮ ಶಿಶುಮಂದಿರಕ್ಕೆ ಉದ್ಯಮಿಗಳಾದ ಹರ್ಷ ಮೇಲಂಟಾ ಮೊಗರೋಡಿ ಭೇಟಿ

ಬೆಳ್ತಂಗಡಿ: ಮೊಗ್ರು ಗ್ರಾಮದ ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.) ಅಲೆಕ್ಕಿ – ಮುಗೇರಡ್ಕ, ಶ್ರೀರಾಮ ಶಿಶುಮಂದಿರಕ್ಕೆ ಉದ್ಯಮಿಗಳಾದ ಹರ್ಷ ಮೇಲಂಟಾ ಮೊಗರೋಡಿ ಇವರು ಮಾ.06 ರಂದು ಭೇಟಿ ನೀಡಿದರು.

ಬಳಿಕ ಮಾತಾಡಿದ ಅವರು ಶಿಶು ಮಂದಿರದ ಮಕ್ಕಳಿಗೆ ಶುಭಹಾರೈಸಿ, ಮೆಚ್ಚುಗೆ ವ್ಯಕ್ತಪಡಿಸಿ, ಶಾಲಾ ಚಟುವಟಿಕೆಗಳಿಗೆ ಸಹಕಾರ ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಶಿಶುಮಂದಿರದ ಸಂಚಾಲಕರಾದ ಪ್ರವೀಣ್ ಮತ್ತಿಲಾರು, ಕಾರ್ಯದರ್ಶಿ ಭರತ ಗೌಡ ಪುಣ್ಕೆತಡಿ, ಸದಸ್ಯರಾದ ರಮೇಶ.ಎನ್ ನೆಕ್ಕರಾಜೆ, ವರುಣ್.ಎನ್ ನೆಕ್ಕರಾಜೆ, ವಿನಯ ಬರುಂಗುಡೆಲು, ಮಾತಾಜಿಗಳಾದ ಪುಷ್ಪಲತಾ, ರಮ್ಯಾ, ನವ್ಯಶ್ರೀ, ಕುಸುಮ, ಹಾಗೂ ಪ್ರಶಾಂತ್ ಗೌಡ ಉರಂಬುತ್ತಿಮಾರು, ಪುಟಾಣಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *