Breaking
7 Mar 2026, Sat

ಶ್ರೀ ಕ್ಷೇತ್ರ ಮಿತ್ತಮಜಲು ಬ್ರಹ್ಮಕಲಶ ಉತ್ಸವದ ಪೂರ್ವಭಾವಿ ಸಿದ್ಧತಾ ಸಭೆ

ಬಂಟ್ವಾಳ: ಶ್ರೀ ನಡಿಯೇಲು ದೈಯ್ಯಂಗುಲು, ಶ್ರೀ ಉಳ್ಳಾಲ್ತಿ, ಶ್ರೀ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ಕ್ಷೇತ್ರ ಮಿತ್ತಮಜಲಿನಲ್ಲಿ ಮಾರ್ಚ್ 18, 19 ಮತ್ತು 20 ರಂದು ಮೂರು ದಿನಗಳ ಕಾಲ ನಡೆಯಲಿರುವ ಸ್ವರ್ಣಬಿಂಬಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆಯು ನಗ್ರಿ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಮಾ. 5 ರಂದು ನಡೆಯಿತು.

ಸಭೆಯಲ್ಲಿ ಮಾಗಣೆಯ ತಂತ್ರಿಗಳಾದ ಶ್ರೀ ಎಂ.ಸುಬ್ರಹ್ಮಣ್ಯ ಭಟ್, ಶ್ರೀ ಕ್ಷೇತ್ರದ ಜೀರ್ಣೋದ್ದಾರ ಹಾಗೂ ನೂತನ ಸ್ವರ್ಣ ಬಿಂಬ ಪ್ರತಿಷ್ಠಾ ಸಮಿತಿಯ ಗೌರವಾಧ್ಯಕ್ಷರಾದ ನಗ್ರಿಗುತ್ತು ವಿವೇಕ್ ಶೆಟ್ಟಿ, ಅಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ ಸಂಕೇಶ, ಕೋಶಾಧಿಕಾರಿಯಾದ ದೇವಿಪ್ರಸಾದ್ ಪೂಂಜ ಬರಂಗರೆ, ಕಾರ್ಯದರ್ಶಿಯಾದ ಚಂದ್ರಶೇಖರ್ ಶೆಟ್ಟಿ ನೀಲ್ಯ, ಜೊತೆ ಕಾರ್ಯದರ್ಶಿಯಾದ ರತ್ನಾಕರ ಪೂಜಾರಿ ನಾಡಾರು ಹಾಗೂ ಹೊರ ಕಾಣಿಕೆ ಸಮರ್ಪಣ ಸಮಿತಿಯ ಮುಖ್ಯ ಸಂಚಾಲಕರಾದ ಜಯಶಂಕರ್ ಬಾಸ್ರಿತ್ತಾಯ ಉಪಸ್ಥಿತರಿದ್ದರು. ಇದರೊಂದಿಗೆ ನಗ್ರಿ ಶ್ರೀ ಶಾರದಾ ಭಜನಾ ಮಂದಿರ, ಯುವಕ ಮಂಡಲ ಮತ್ತು ಯುವತಿ ಮಂಡಲದ ಪದಾಧಿಕಾರಿಗಳು ಹಾಗೂ ಗೌರವಾನ್ವಿತ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ನಗ್ರಿ ಪರಿಸರದ ಗ್ರಾಮಸ್ಥರು ಹಾಗೂ ಸಮಿತಿಯ ಸದಸ್ಯರು ಭಾಗವಹಿಸಿ ಆಮಂತ್ರಣ ಪತ್ರಿಕೆ ವಿತರಣೆ, ಹೊರೆ ಕಾಣಿಕೆ ಸಮರ್ಪಣೆ ಹಾಗೂ ಉತ್ಸವದ ಸಿದ್ಧತೆಗಳ ಕುರಿತು ಚರ್ಚಿಸಿದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಎಲ್ಲರ ಸಹಕಾರ ಅತ್ಯಗತ್ಯವೆಂದು ಸಭೆಯಲ್ಲಿ ತಿಳಿಸಲಾಯಿತು.

ಈ ಸಭೆಯಲ್ಲಿ ವಿವಿಧ ಜವಾಬ್ದಾರಿಗಳ ಹಂಚಿಕೆ, ವ್ಯವಸ್ಥೆಗಳ ಯೋಜನೆ ಹಾಗೂ ಭಕ್ತರ ಭಾಗವಹಿಸುವಿಕೆ ಕುರಿತು ವಿಚಾರ ವಿನಿಮಯ ನಡೆಯಿತು. ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಲಾಯಿತು.

Leave a Reply

Your email address will not be published. Required fields are marked *