ಬಂಟ್ವಾಳ: ಸಜೀಪಮೂಡದ ಕಂದೂರಿನ ಶ್ರೀ ಕೃಷ್ಣ ಶಿಶು ಮಂದಿರದ ವಾರ್ಷಿಕೋತ್ಸವವು ಫೆ. 28ರಂದು ಆಡಳಿತ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ನೌಕಾಸೇನಾ ಕಮಾಂಡರ್ ವಸಂತ ರಾವ್ ಅವರು, ಭಾರತೀಯ ಮೌಲ್ಯಗಳನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯಕ್ರಮಗಳು ಶಿಶು ಮಂದಿರದ ಮೂಲಕ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ನಿವೃತ್ತ ಶಿಕ್ಷಕ ಕೆ. ನಾರಾಯಣ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ದೇವರಿಗೆ ಸಮಾನರು. ಅವರಿಗೆ ಉತ್ತಮ ವಿಚಾರಗಳನ್ನು ಬೋಧಿಸಿದರೆ ಸಮಾಜವೂ ಉತ್ತಮವಾಗುತ್ತದೆ ಎಂದು ಹೇಳಿದರು.
ಸಜೀಪ ಮಾಗಣೆ ತಂತ್ರಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಶಿಶು ಮಂದಿರದ ಮೂಲಕ ಮಕ್ಕಳಿಗೆ ಉತ್ತಮ ಶಿಸ್ತು, ಸಂಸ್ಕಾರ ಹಾಗೂ ಜೀವನ ಮೌಲ್ಯಗಳು ಬೆಳೆಸಲಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಜಯ ಶಂಕರ್ ಬಾಸ್ರಿತಾಯ, ಸುಬ್ರಾಯ ಕಾರಂತ, ವಿಜಯ ರೈ, ಸೋಮನಾಥ ಕಂದೂರು, ಸುರೇಶ್ ಬಂಗೇರ, ಜಗದೀಶ ಐತಾಳ, ಪ್ರದೀಪ್ ಶೆಟ್ಟಿ ಬಿಜಂದಾರ್, ವಿಜಯಲಕ್ಷ್ಮಿ ಮೈಯ್ಯ, ರತ್ನವತಿ, ರಕ್ಷಿತಾ ಮಾತಾಜಿ, ಸುಜಾತ ಮಾತಾಜಿ ಮೊದಲಾದವರು ಉಪಸ್ಥಿತರಿದ್ದರು.









