Breaking
26 Apr 2026, Sun

ಆರಂಬೋಡಿಯ ಹೊಕ್ಕಾಡಿಗೋಳಿ ಕೂಡು ರಸ್ತೆಯಲ್ಲಿ ಶ್ರೀಮಾ ಮೆಡಿಕಲ್ಸ್ ಶುಭಾರಂಭ

ಬೆಳ್ತಂಗಡಿ: ತಾಲೂಕಿನ ಗಡಿಭಾಗದ ಗ್ರಾಮವಾದ ಆರಂಬೋಡಿಯ ಹೊಕ್ಕಾಡಿಗೋಳಿ ಕೂಡು ರಸ್ತೆಯಲ್ಲಿ ಫೆ. 22 ರಂದು ಶ್ರೀಮಾ ಮೆಡಿಕಲ್ಸ್ ಶುಭಾರಂಭಗೊಂಡಿತು.

ಶ್ರೀಮಾ ಮೆಡಿಕಲ್ಸ್ ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು, ಗ್ರಾಮೀಣ ಭಾಗದ ಜನರ ಅವಶ್ಯಕತೆಗಳನ್ನು ಮನಗಂಡು ನಿವೃತ್ತ ಜಾನುವಾರು ಅಭಿವೃದ್ಧಿ ಅಧಿಕಾರಿ ಕೆ. ಶ್ರೀಧರ ಶೆಟ್ಟಿಯವರು ಈ ಸಂಸ್ಥೆಯನ್ನು ಪ್ರಾರಂಭಿಸಿರುವುದು ಪ್ರಶಂಸನೀಯ ಕಾರ್ಯವಾಗಿದೆ. ಈ ಸಂಸ್ಥೆ ಜನಪಯೋಗಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ದೀಪ ಬೆಳಗಿಸಿ ಆಶೀರ್ವಚನ ನೀಡಿದ ಪೂಂಜಾ ಕ್ಷೇತ್ರದ ಅರ್ಚಕರಾದ ವಿದ್ವಾನ್ ಪ್ರಕಾಶ್ ಆಚಾರ್ಯ ಅವರು, ಈ ಪ್ರದೇಶದ ಜನರ ಬಹುಕಾಲದ ನಿರೀಕ್ಷೆಯಾಗಿದ್ದ ಮೆಡಿಕಲ್ ಸ್ಟೋರ್ ಆರಂಭಿಸಿರುವ ಮಾಲೀಕರ ಪ್ರಯತ್ನಕ್ಕೆ ಮಾಗಣೆಯ ಆರಾಧ್ಯ ದೇವಿ ಪೂಂಜ ಶ್ರೀಪಂಚದುರ್ಗಾ ಪರಮೇಶ್ವರಿ ಹಾಗೂ ಮಾಗಣೆಯ ದೈವಗಳ ಸಂಪೂರ್ಣ ಅನುಗ್ರಹ ಲಭಿಸಿ ಉತ್ತಾರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಸಿಎ ಬ್ಯಾಂಕ್ ಸಿದ್ದಕಟ್ಟೆಯ ಅಧ್ಯಕ್ಷ ಪ್ರಭಾಕರ ಪ್ರಭು, ನಿರ್ದೇಶಕರಾದ ದಿನೇಶ್, ಶಿವಗೌಡ, ವೀರಪ್ಪ, ಸತೀಶ್ ಪೂಜಾರಿ, ಆರಂಬೋಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಕೆಎಂಎಫ್ ದಕ್ಷಿಣ ಕನ್ನಡದ ನಿರ್ದೇಶಕ ಪ್ರಭಾಕರ್ ಎಚ್. ಸಹಕಾರಿ ಸಂಘದ ನಿರ್ದೇಶಕರು ಮತ್ತು ಸದಸ್ಯರು, ಸಿದ್ದಕಟ್ಟೆಯ ಜನಪ್ರಿಯ ವೈದ್ಯರಾದ ಡಾ. ಸುದೀಪ್, ಡಾ. ಕೃಷ್ಣಮೂರ್ತಿ, ಡಾ. ಪ್ರಭಾಚಂದ್ರ, ಸಿದ್ದಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಔಷಧಿ ಮಾರಾಟಗಾರರ ಸಂಘದ ಅಧ್ಯಕ್ಷ ಉದಯ್ ಕುಮಾರ್ ಜೈನ್ ಮಡಂತ್ಯಾರವರು ಭಾಗವಹಿಸಿ ಶುಭ ಹಾರೈಸಿದರು.

ಆರಂಬೋಡಿ ಪಂಚಾಯಿತಿಯ ಪಿಡಿಓ ಗಣೇಶ್ ಶೆಟ್ಟಿ ಗೋಳಿದೊಟ್ಟು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಈ ವೇಳೆ ಮಾಲಿಕ ಕೆ. ಶ್ರೀಧರ ಶೆಟ್ಟಿ, ಮಂದಾರತಿ ಶ್ರೀಧರ ಶೆಟ್ಟಿ, ಶಮಂತ ಶೆಟ್ಟಿ, ಸುಮಂಗಳ ಶಮಂತ್ ಹಾಗೂ ಬಂಧುಗಳು ಉಪಸ್ಥಿತರಿದ್ದರು.

ಶ್ರೀಮಾ ಮೆಡಿಕಲ್ಸ್‌ನಲ್ಲಿ ಪಶುವೈದ್ಯಕೀಯ ಔಷಧಿಗಳು, ಹೋಮಿಯೋಪತಿ ಹಾಗೂ ಆಯುರ್ವೇದ ಔಷಧಿಗಳು ಲಭ್ಯವಿದೆ.

Leave a Reply

Your email address will not be published. Required fields are marked *