ಮೈಸೂರು: ಸರ್ವಕಲ ಸೇವಾ ಟ್ರಸ್ಟ್ (ರಿ) ಹಾಗೂ PGRSS ಪಂಚಾಯತ್ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿಯ ಸಹಯೋಗದಲ್ಲಿ ರಾಷ್ಟ್ರಮಟ್ಟದ ಸಪ್ತಸ್ವರ ಕರೋಕೆ ಗಾಯನ ಸೀಸನ್–3 ಕಾರ್ಯಕ್ರಮದ ಪೋಸ್ಟರ್‌ನ್ನು ಆಶ್ರಮದ ತಾಯಂದಿರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಮಂಗಳೂರು ಮೀನಾನಾಥ್, ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಜಿ.ಟಿ. ದೇವೇಗೌಡರು, ಯೋಗ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸನ್, ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಅಧ್ಯಕ್ಷರಾದ ಡಾ. ನಾಗರಾಜು ವಿ. ಬೈರಿ, ಚಂದ್ರಶೇಖರ್ ರಾವ್ ಟ್ರಸ್ಟ್ ಮುಂಬೈ ಅಧ್ಯಕ್ಷರಾದ ಶ್ರೀದೇವಿ ರಾವ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ.

ಹಲವಾರು ಪ್ರತಿಭಾವಂತ ಗಾಯಕ-ಗಾಯಕರಿಗೆ ವೇದಿಕೆ ಕಲ್ಪಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಮೊದಲು ನೋಂದಣಿ ಮಾಡಿಕೊಳ್ಳುವ 30 ಜನರಿಗೆ ಮಾತ್ರ ಅವಕಾಶ ಇರುತ್ತದೆ. ಪ್ರತಿಯೊಬ್ಬರಿಗೆ ಒಂದು ಸೋಲೋ ಹಾಗೂ ಒಂದು ಡುಯೆಟ್ ಹಾಡುವ ಅವಕಾಶ ನೀಡಲಾಗುತ್ತದೆ.

ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಸದಸ್ಯರಿಗೆ ನೋಂದಣಿ ಶುಲ್ಕ ರೂ. 700/- ನಿಗದಿಪಡಿಸಲಾಗಿದೆ. ಎಲ್ಲಾ ಭಾಗವಹಿಸುವವರಿಗೆ ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುತ್ತದೆ. ವೇದಿಕೆ ನಿಮ್ಮದಾಗಿದೆ – ಬನ್ನಿ, ನೋಂದಣಿ ಮಾಡಿಕೊಳ್ಳಿ, ಹಾಡಿ ಮತ್ತು ಸಂತೋಷಪಡಿ.

ಕಾರ್ಯಕ್ರಮದ ಆಯೋಜಕರಾಗಿ ಸರ್ವಕಲ ಸೇವಾ ಟ್ರಸ್ಟ್ ಅಧ್ಯಕ್ಷರಾದ ನೀಮ ಲೋಬೊ, ಕಾರ್ಯದರ್ಶಿ ಜೋಸೆಫ್ ಲೋಬೊ ಹಾಗೂ PGRSS ಪಂಚಾಯತ್ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿಯ ಅಧ್ಯಕ್ಷರಾದ ಯಾದವ್ ಹರೀಶ್ ಮತ್ತು ರಾಜ್ಯ ಸಂಚಾಲಕರಾದ ರಕ್ತದಾನಿ ಮಂಜು ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ನೋಂದಣಿಗಾಗಿ ಸಂಪರ್ಕಿಸಿ: 9902175996 / 9740176567








