ಬಂಟ್ವಾಳ: ಗುಡ್ಡವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಕುಕ್ಕಿಪಾಡಿ ಗ್ರಾಮದ ಕೆಂತಲೆ ಎಂಬಲ್ಲಿ ನಡೆದಿದೆ.

ನಿತ್ಯಾನಂದ ಪೂಜಾರಿ ಎಂಬವರಿಗೆ ಸೇರಿದ ಜಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸುಮಾರು ಒಂದೂವರೆ ಎಕರೆ ಪ್ರದೇಶಕ್ಕೆ ವ್ಯಾಪಿಸಿದೆ. ಈ ಅವಘಡದಲ್ಲಿ ಕಾಡಿನ ಗಿಡ-ಮರಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಅಲ್ಲದೆ, ಬೆಂಕಿಯ ಕೆನ್ನಾಲಿಗೆಗೆ ಹಲವಾರು ಅಡಿಕೆ ಸಸಿಗಳು ಕೂಡ ನಾಶವಾಗಿವೆ ಎಂದು ನಿತ್ಯಾನಂದ ಪೂಜಾರಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡ್ಡಿದರು. ಆದರೆ ಅಗ್ನಿಶಾಮಕ ದಳದವರು ಬಾರದೇ ಇದ್ದುದರಿಂದ ಸ್ಥಳೀಯರು ನೀರು ಹಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಸಹಕರಿಸಿದ್ದಾರೆ.







