ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ಇದರ ಕಲ್ಲಡ್ಕ ಶಾಖೆಯ ನೂತನ ಕಟ್ಟಡ ‘ಸಮೃದ್ಧಿ’ ಯ ಉದ್ಘಾಟನೆ ಹಾಗೂ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಕಾರ್ಯಕ್ರಮ ಸೋಮವಾರ ನಡೆಯಿತು.
ನೂತನ ಕಟ್ಟಡವನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿ, ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಜನ ಸಾಮಾನ್ಯರಿಗೆ ಸುಲಭವಾಗಿ ಆರ್ಥಿಕ ನೆರವನ್ನು ಒದಗಿಸುವಲ್ಲಿ ಸಹಕಾರಿ ಸಂಘಗಳ ಪಾತ್ರ ಮಹತ್ವದ್ದಾಗಿದೆ.ಪ್ರಾಮಾಣಿಕ ಕಾರ್ಯ ನಿರ್ವಹಣೆ ಮತ್ತು ಸದೃಢ ಹೆಜ್ಜೆಯ ಮೂಲಕ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಜನಮಾನಸದಲ್ಲಿ ಚಿರಸ್ಥಾಯಿಯಾಗಿದೆ. ಕಲ್ಲಡ್ಕ ದಂತಹ ಸಣ್ಣ ಊರಿನಲ್ಲಿ ಹನ್ನೆರಡಕ್ಕೂ ಹೆಚ್ಚು ಆರ್ಥಿಕ ವ್ಯವಸ್ಥೆ ಒದಗಿಸುವ ಸಹಕಾರಿ ಸಂಸ್ಥೆಗಳು ಇರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಭದ್ರತಾ ಕೊಠಡಿತನ್ನು ಉದ್ಘಾಟಿಸಿದರು.ನೂತನ ಕಟ್ಟಡದ ನಾಮಫಲಕವನ್ನು ಕಿಶೋರ್ ಕುಮಾರ್ ಪುತ್ತೂರು ಅನಾವರಣಗೊಳಿಸಿದರು.ಶಾಖೆಯ ಗಣಕೀಕರಣವನ್ನು ಮಾಜಿ ಶಾಸಕ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ದ್ವೀಪ ಪ್ರಜ್ವಲನಗೊಳಿಸಿದರು.ಕ್ಯಾಂಪ್ಕೊ ನಿರ್ದೇಶಕ ಎಸ್. ಆರ್ . ಸತೀಶ್ಚಂದ್ರ, ಬಾಳ್ತಿಲ ಗೋಳ್ತಮಜಲು ಗ್ರಾಮ ಪಂಚಾಯತಿ ಅಧ್ಯಕ್ಷೆಪ್ರೇಮಾ ಪುರುಷೋತ್ತಮ ಭಾಗವಹಿಸಿದ್ದರು.
ಸಹಕಾರಿ ಸಂಘದ ಅಧ್ಯಕ್ಷ ಹೆಚ್.ಜಗನ್ನಾಥ ಸಾಲಿಯಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸಂಘದ ನಿರ್ದೇಶಕರಾದ ಹರೀಶ್ ನಾಯಕ್ ಯಂ, ಮನೋರಂಜನ್ ಕೆ.ಆರ್., ವಿಶ್ವನಾಥ ಎಂ., ಉದಯ ಕುಮಾರ್ ಎ. ಬಾಲಕೃಷ್ಣ ಪಿ. ಎಸ್., ಜಯಂತಿ ಎಚ್. ರಾವ್, ಶುಭಲಕ್ಷ್ಮೀ, ಗೋವರ್ಧನ ಕುಮಾರ್ ಎ., ದಯಾನಂದ ಆಳ್ವ, ಸುಂದರ ಡಿ., ದಿವಾಕರ ಎ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್ .ಕೆ, ಕೇಂದ್ರ ಕಚೇರಿ ಹಾಗೂ ಶಾಖಾ ಕಚೇರಿಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿರ್ದೇಶಕಿ ಜಯಂತಿ ಎಚ್.ರಾವ್ ಪ್ರಾರ್ಥನೆ ಹಾಡಿದರು.ಸಂಘದ ನಿರ್ದೇಶಕ ವಿಶ್ವನಾಥ ಸ್ವಾಗತಿಸಿದರು. ಉಪಾಧ್ಯಕ್ಷ ಮೋಹನ್ ಕೆ. ಎಸ್. ವಂದಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.