ಉಡುಪಿ: ನಗರದ ಅಂಬಾಗಿಲು ವಾರ್ಡ್ ನ ಕಕ್ಕುಂಜೆಯಲ್ಲಿ ವ್ಯಕ್ತಿಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಪುರುಷೋತ್ತಮ ನಾಯಕ್(52) ಎಂದು ಗುರುತಿಸಲಾಗಿದೆ.

ಪುರುಷೋತ್ತಮ ನಾಯಕ್ ಅವರು ಬಾವಿಗೆ ಜಿಗಿಯುವ ಮೊದಲು ನೈಲಾನ್ ಹಗ್ಗವನ್ನು ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅವರ ತಲೆ ದೇಹದಿಂದ ಬೇರ್ಪಟ್ಟಿದ್ದು, ಬಾವಿಯ ನೀರು ಸಂಪೂರ್ಣ ರಕ್ತಮಯವಾಗಿತ್ತು ಎಂದು ತಿಳಿದುಬಂದಿದೆ.

ಮಣಿಪಾಲದ ಹೋಟೆಲ್ ವೊಂದರಲ್ಲಿ ಪುರುಷೋತ್ತಮ ನಾಯಕ್ ಅವರು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಹಣಕಾಸಿನ ಸಮಸ್ಯೆಯಿಂದಾಗಿ ಅವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






