ಮಂಗಳೂರು: ಮುಲ್ಕಿಯ ಪಾವಂಜೆ ದೇವಸ್ಥಾನದ ರಸ್ತೆಯಲ್ಲಿ ಬಸ್ ಗಾಗಿ ಕಾಯುತ್ತಿದ್ದ ತಾಯಿ ಮಗಳಿಗೆ ಟ್ರೈಲರ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಗಂಭೀರ ಗಾಯಗೊಂಡಿರುವ ಘಟನೆ ಜ. 6 ರಂದು ನಡೆದಿದೆ.

ಗಂಭೀರ ಗಾಯಗೊಂಡವರನ್ನು ಶಿಕ್ಷಕಿ ಕುಸುಮಾ ಮತ್ತು ಅವರ ಮಗಳು ಸುಮಲತಾ (14) ಎಂದು ಗುರುತಿಸಲಾಗಿದೆ.

ಪಾವಂಜೆಯಲ್ಲಿ ಬಸ್ ಗಾಗಿ ಕಾಯುತ್ತಿದ್ದ ವೇಳೆ ಮಂಗಳೂರಿನಿಂದ ಉಡುಪಿ ಕಡೆ ಸಂಚರಿಸುತ್ತಿದ ಟ್ರೈಲರ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರಿಗೂ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಟ್ರೈಲರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.







