ಹೆಜಮಾಡಿ ಟೋಲ್‌ಗೇಟ್ ರಸ್ತೆಯಲ್ಲಿ ವಿದ್ಯಾರ್ಥಿಗಳ ಹುಚ್ಚಾಟ: ರಸ್ತೆ ಮಧ್ಯೆ ಪಟಾಕಿ ಸಿಡಿಸಿ ವಾಹನ ಸಂಚಾರಕ್ಕೆ ಅಡ್ಡಿ

ಉಡುಪಿ: ಹೆಜಮಾಡಿ ಟೋಲ್‌ ಗೇಟ್‌ ರಸ್ತೆಯಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳ ತಂಡವೊಂದು ರಸ್ತೆಯ ಮಧ್ಯೆದಲ್ಲಿ ನೃತ್ಯ ಮಾಡಿ ಪಟಾಕಿ ಸಿಡಿಸುವ ಮೂಲಕ ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡಿದ ಘಟನೆ ನಡೆದಿದೆ.

ಕೇರಳದಿಂದ ಎರಡು ಬಸ್‌ಗಳಲ್ಲಿ ಉಡುಪಿಗೆ ಪ್ರವಾಸಕ್ಕೆಂದು ಬಂದ ವಿದ್ಯಾರ್ಥಿಗಳು ಬಸ್‌ ಗಳನ್ನು ನಿಲ್ಲಿಸಿ ರಸ್ತೆಗಿಳಿದು ನೃತ್ಯ ಮಾಡುವುದರ ಜೊತೆಗೆ ಪಟಾಕಿ ಸಿಡಿಸಿದ್ದಾರೆ. ಇದರಿಂದಾಗಿ ವಾಹನ ಸವಾರರಿಗೆ ಭಾರೀ ತೊಂದರೆಯುಂಟಾಗಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Leave a Reply

Your email address will not be published. Required fields are marked *