ಕಾಸರಗೋಡು: ಯುವಕನೊಬ್ಬ ನಾಪತ್ತೆಯಾದ ಘಟನೆ ಚಟ್ಟಂಚಾಲ್ ಸಮೀಪದ ಬೆಂಡಿಚ್ಚಾಲ್ ನಲ್ಲಿ ನಡೆದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಎಯ್ಯಾಳದ ದಿ. ಅಬ್ದುಲ್ಲ ಕುಂಞ ಅವರ ಪುತ್ರ ನಿಸಾರ್ (47)ಎಂದು ಗುರುತಿಸಲಾಗಿದೆ.

ಜ.24 ರಂದು ನಿಸಾರ್ ನಾಪತ್ತೆಯಾಗಿದ್ದು, ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಟ ನಡೆಸಿದರು ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಬಳಿಕ ನಿಸಾರ್ ಅವರ ಮೃತದೇಹವು ತಳಂಗರೆ ಸೇತುವೆ ಸಮೀಪ ಚಂದ್ರಗಿರಿ ಹೊಳೆಯಲ್ಲಿ ಪತ್ತೆಯಾಗಿದೆ.
ಈ ಕುರಿತು ಮೃತರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.





