ಬಂಟ್ವಾಳ: ಸಜೀಪ ನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ದೇವರಿಗೆ ವಿಶೇಷ ರಂಗ ಪೂಜೆ ಸೇವೆಯು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಅರ್ಚಕ ಗಣಪತಿ ಮಹಾಬಲೇಶ್ವರ ಭಟ್, ಕೆ ರಾಧಾಕೃಷ್ಣ ಆಳ್ವ, ಬಿಜಂದಾರ್ ಗುತ್ತು ಶಿವರಾಮ ಭಂಡಾರಿ, ಸತ್ಯನಾರಾಯಣ ನಾಯಕ್, ಸೋಮನಾಥ ಭಂಡಾರಿ, ರಾಮ ಮೊದಲಾದವರು ಉಪಸ್ಥಿತರಿದ್ದರು.




