Breaking
22 Mar 2026, Sun

ಜ. 23: ಬೊಲ್ಪು ರೈತ ಉತ್ಪಾದಕರ ಕಂಪನಿ ನಿಯಮಿತದ ಕಛೇರಿ ಮಾರಾಟ ಮಳಿಗೆ ಉದ್ಘಾಟನೆ

ಬಂಟ್ವಾಳ: ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ, ವಿಟ್ಲ ಇದರ ಸಹಯೋಗದೊಂದಿಗೆ ಬೊಲ್ಪು ರೈತ ಉತ್ಪಾದಕರ ಕಂಪನಿ ನಿಯಮಿತ ಬಂಟ್ವಾಳ ಇದರ ಕಛೇರಿ ಮಾರಾಟ ಮಳಿಗೆಯು ಜ. 23 ರಂದು ಉದ್ಘಾಟನೆಗೊಳ್ಳಲಿದೆ.

ಬಿ.ಸಿ.ರೋಡಿನ ಕೃಷಿಕ ಸಮಾಜ ಕಟ್ಟಡದ ನೆಲ ಅಂತಸ್ತಿನಲ್ಲಿ ಕಚೇರಿ ಶುಭಾರಂಭಗೊಳ್ಳಲ್ಲಿದ್ದು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕ ಸರ್ಕಾರ ಮಾಜಿ ಸಚಿವ ಬಿ. ರಮಾನಾಥ ರೈ ದೀಪ ಪ್ರಜ್ವಲಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ದ.ಕ. ಜಿಲ್ಲೆ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ, ದ. ಕ. ಜಿಲ್ಲೆ ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ಅಶೋಕ್, ಬಂಟ್ವಾಳದ ಕೃಷಿ ಇಲಾಖೆ ಸಹಕಾಯಕ ಕೃಷಿ ನಿರ್ದೇಶಕಿ ವೀಣಾ ಕೆ ಆರ್, ಬಂಟ್ವಾಳದ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ಜೋ. ಪ್ರದೀಪ್ ಡಿ ಸೋಜಾ, ವಿಟ್ಲ ಭಾರತೀಯ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತದ ಆಡಳಿತ ನಿರ್ದೇಶಕರು ಪ್ರಸಾದ್ ಶೆಟ್ಟಿ, ಬಂಟ್ವಾಳ ತಾಲೂಕಿನ ಕೃಷಿಕ ಸಮಾಜದ ಅಧ್ಯಕ್ಷರು ಪದ್ಮರಾಜ್ ಬಲ್ಲಾಳ್, ಇಕೋವಾ ಬೆಂಗಳೂರಿನ ಸಹಾಯಕ ನಿರ್ದೇಶಕರು ಗೋಪಾಲ್ ಹೆಗ್ಡೆ ಇನ್ನೂ ಹಲವರು ಭಾಗವಹಿಸಲಿದ್ದಾರೆ.

ಈ ಕಚೇರಿಯಲ್ಲಿ ಬ್ಲಾಕ್ ಟಾರ್ಪಲ್ ಮಾರಾಟ, ಸೋಲಾರ್ ಟಾರ್ಪಲ್ ಮಾರಾಟ , ಪಿತ್ ಗೊಬ್ಬರ, ಕೀಟನಾಶಕ, ಕಳೆನಾಶಕ, ಮೈಲ್ ತುತ್ತು ಸುಣ್ಣ, ಕಹಿಬೇವು ಮತ್ತು ಹರಳಿಂಡಿ, ಮಣ್ಣು ಪರೀಕ್ಷಾ ಸೌಲಭ್ಯ, ಯಂತ್ರೋಪಕರಣ ಮಾರಾಟ ಮತ್ತು ಸೇವೆ, ಜೇನು ತುಪ್ಪ & ಸಾಕಣೆ ಸಲಕರಣೆ, ಅಡಿಕೆ, ತೆಂಗು ವಿವಿಧ ತರಕಾರಿ & ಹಣ್ಣಿನ ಗಿಡಗಳ ಮಾರಾಟ, ಕೃಷಿ ತೋಟಗಾರಿಕೆ ಮತ್ತು ಸರಕಾರದ ವಿವಿಧ ಕೃಷಿ ಸಂಬಂಧಿತ ಸಹಾಯಧನ ವಿಮಾ ಸೌಲಭ್ಯ ಪಡೆಯಲು ಸಹಕಾರ, ವಿವಿಧ ರೀತಿಯ ಕೀಟ & ರೋಗ ಬಾಧೆಗೆ ವಿಜ್ಞಾನಿಗಳ ಮೂಲಕ ಸಲಹೆ ಮತ್ತು ಪರಿಹಾರ, ವಿವಿಧ ರೀತಿಯ ತರಕಾರಿ ಬೀಜಗಳ ಮಾರಾಟ ವ್ಯವಸ್ಥೆ ಲಭ್ಯವಿದೆ.

Leave a Reply

Your email address will not be published. Required fields are marked *