Breaking
10 May 2026, Sun

ಪದವಿನಂಗಡಿಯಲ್ಲಿ ಸ್ಕೂಟರ್ ಮೇಲೆ ಬಿದ್ದ ಬೃಹತ್ ಮರ

ಮಂಗಳೂರು: ಆಕಸ್ಮಿಕವಾಗಿ ಬೃಹತ್‌ ಗಾತ್ರದ ಮರವೊಂದು ಸ್ಕೂಟರ್‌ ಮೇಲೆ ಬಿದ್ದ ಪರಿಣಾಮ ಸ್ಕೂಟರ್‌ ಗೆ ಭಾರೀ ಹಾನಿ ಉಂಟಾದ ಘಟನೆ ಪದವಿನಂಗಡಿ ಪ್ರದೇಶದ ಕೊರಗಜ್ಜ ಕಟ್ಟೆ ಮುಂಭಾಗದಲ್ಲಿ ನಡೆದಿದೆ.

ಮರವೊಂದು ಸ್ಕೂಟರ್ ಮೇಲೆ ಮರ ಬಿದ್ದ ರಭಸಕ್ಕೆ ಸಮೀಪದಲ್ಲಿದ್ದ ವಿದ್ಯುತ್ ಕಂಬವೂ ಮುರಿದು ಬಿದ್ದಿದ್ದು ಘಟನೆಯಿಂದ ಕಟ್ಟಡವೊಂದರ ಗಾಜುಗಳು ಪುಡಿ ಪುಡಿಯಾಗಿವೆ. ಅದೃಷ್ಟವಶಾತ್, ಘಟನೆಯ ವೇಳೆ ಆ ಸ್ಥಳದಲ್ಲಿ ಯಾರೂ ಇರದ ಕಾರಣ ಪ್ರಾಣಾಪಾಯ ತಪ್ಪಿದಂತಾಗಿದೆ.

ಘಟನಾ ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ತಕ್ಷಣ ಧಾವಿಸಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಮರ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗಿದೆ.

Leave a Reply

Your email address will not be published. Required fields are marked *