Breaking
21 Jun 2026, Sun

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಾರು ಸುಟ್ಟು ಭಸ್ಮ

ಪುತ್ತೂರು : ಶ್ರೀ ಪೂಮಾಣಿ-ಕಿನ್ನಿಮಾನಿ ಬಳಿಯ ಪಡುಮಲೆ ಹಾಗೂ ಬಡಗನ್ನೂರು ಗ್ರಾಮ ಪಂಚಾಯತ್‌ನ ಮೈಂದಿನಡ್ಕ ವ್ಯಾಘ್ರ ಚಾಮುಂಡಿ ದೈವಸ್ಥಾನದ ಬಳಿಯ ಪಡುಮಲೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಾರೊಂದು ಸುಟ್ಟು ಭಸ್ಮವಾದ ಘಟನೆ ಜ.18 ರಂದು ನಡೆದಿದೆ.

ಗ್ಯಾಸ್ ಬಲೂನ್ ಗಾಳಿಯ ರಭಸಕ್ಕೆ ಹಾರಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಾರು ಬೆಂಕಿಗಾಹುತಿಯಾಗಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *