Breaking
24 Jun 2026, Wed

ಮುಂಡಾಜೆಯ ಮಚ್ಚಿಮಲೆ ಪರಿಸರದಲ್ಲಿ ಕಾಣಿಸಿಕೊಂಡ ಚಿರತೆ

ಬೆಳ್ತಂಗಡಿ: ತಾಲೂಕಿನ ಮುಂಡಾಜೆಯ ಮಚ್ಚಿಮಲೆ ಎಂಬಲ್ಲಿ ಚಿರತೆಗಳು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

ಮಚ್ಚಿಮಲೆ ನಿವಾಸಿಯಾಗಿರುವ ಅನಂತ ಭಟ್ ಅವರ ರಬ್ಬರ್ ತೋಟದಲ್ಲಿ ಮೂರು ಮರಿಗಳೊಂದಿಗೆ ತಾಯಿ ಚಿರತೆಯೊಂದು ಕಾಣಿಸಿಕೊಂಡಿದ್ದು ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋದವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಇಲ್ಲಿನ ಮುಂಡಾಜೆ ಪರಿಸರ ಮತ್ತು ಕಾಯರ್ತೋಡಿಯಲ್ಲಿ ನದಿಬದಿಯಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಸ್ಥಳೀಯ ಜನರು ಮಾಹಿತಿ ನೀಡಿದ್ದಾರೆ.

ಮರಿಗಳೊಂದಿಗೆ ಚಿರತೆ ಓಡಾಟ ನಡೆಸುತ್ತಿದ್ದು ಇದೀಗ ಇದು ಜನರು ಭಯದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು ಸಮಸ್ಯೆ ಬಗೆಹರಿಸಲ ಅರಣ್ಯಾಧಿಕರಿಗಳ ಬಳಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *