Breaking
10 May 2026, Sun

ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಯುವ ದಿನ ಆಚರಣೆ

ಬೆಳ್ತಂಗಡಿ: ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢಶಾಲೆಯಲ್ಲಿ ಜ.12 ರಂದು ಇಂಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ ರಾಷ್ಟ್ರೀಯ ಯುವ ದಿನ ಆಚರಿಸಲಾಯಿತು.

ಈ ಸಂದರ್ಭದಲ್ಲಿ 9ನೇ ತರಗತಿ ವಿದ್ಯಾರ್ಥಿನಿಯರಾದ ಸುಷ್ಮಾ ಸ್ವಾಮಿ ವಿವೇಕಾನಂದರ ಕುರಿತು ಭಾಷಣ ಮಾಡಿದರು ಹಾಗೂ ಪವಿತ್ರಾ ವಿವೇಕಾನಂದರ ಸಂದೇಶಗಳನ್ನು ವಾಚಿಸಿದರು. 8ನೇ ತರಗತಿ ವಿದ್ಯಾರ್ಥಿನಿಯರು ಸ್ವಾಮಿ ವಿವೇಕಾನಂದರು ರಚಿಸಿದ ವೀರ ಸನ್ಯಾಸಿ ಗೀತೆ ಹಾಡಿದರು.

ಶಾಲೆಯ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ವಿವೇಕಾನಂದರ ಜೀವನದ ಚಿಂತನೆಗಳನ್ನು ತಿಳಿಸಿದರು.

ಕಾರ್ಯಕ್ರಮವನ್ನು ಶಿಕ್ಷಕ ಕಿರಣ್ ನಿರ್ವಹಿಸಿದರು.

Leave a Reply

Your email address will not be published. Required fields are marked *