Breaking
24 Jun 2026, Wed

ಬೆಳಾಲು ದೊಂಪದ ಬಲಿ ಉತ್ಸವ ಸಮಿತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಬೆಳಾಲು ಗುತ್ತು ಮನೆಯಲ್ಲಿ ಜ. 24 ರಂದು ನಡೆಯುವ ರಾಜನ್ ದೈವವಾದ ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ ಕಲ್ಕುಡ ಕಲ್ಲುರ್ಟಿ ದೈವಗಳ ಉತ್ಸವ ಹಾಗೂ ಮಾರಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಜ. 11 ರಂದು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪರಿವಾರ ದೈವಗಳ ಆಸ್ರಣ್ಣರಾದ ಗಿರೀಶ್ ಬಾರಿತಾಯ ಪಾರಳ, ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀನಿವಾಸ ಗೌಡ ವಕೀಲರು ಶ್ರೀ ಸೌಧ, ಗೌರವ ಸಲಹೆಗಾರರಾದ ಲಿಂಗಪ್ಪ ಪೂಜಾರಿ ಬನಂದೂರು, ದೀಲಿಪ್ ಕುಮಾರ್ ಜೈನ್, ಗೌರವಾಧ್ಯಕ್ಷರಾದ ಸೂರಪ್ಪ ಗೌಡ ಭಂಡಾರಿ ಮಜಲು ಅಧ್ಯಕ್ಷರಾದ ನೀಲಯ್ಯ ಗೌಡ ಭೀಮಂಡೆ , ಪ್ರಧಾನ ಕಾರ್ಯದರ್ಶಿಯಾದ ಶ್ರೀನಿವಾಸ ಗೌಡ ಗಣಪನ ಗುತ್ತು, ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಉಪ ಸಮಿತಿಯ ಸಂಚಾಲಕರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *