Breaking
10 May 2026, Sun

ವಿದ್ಯುತ್ ಕಂಬದ ಕೆಲಸ ಮಾಡುತ್ತಿದ್ದಾಗ ಅವಘಡ, ಖಾಸಗಿ ಗುತ್ತಿಗೆ ಕಂಪನಿಯ ನೌಕರ ಸಾವು

ಬೆಳ್ತಂಗಡಿ: ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಸಂಭವಿಸಿದ ಅವಘಡದಲ್ಲಿ ಖಾಸಗಿ ಗುತ್ತಿಗೆ ಕಂಪನಿಯೊಂದರ ನೌಕರ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟುವಿನ ಕಜೆಯಲ್ಲಿ ಜ.8ರಂದು ನಡೆದಿದೆ.

ಮೃತ ವ್ಯಕ್ತಿಯನ್ನು ಪುಂಜಾಲಕಟ್ಟೆಯ ಎನ್ ಸಿ ರೋಡ್ ನಿವಾಸಿ ಅಕ್ಬರ್ ಅಲಿ (22ವ) ಎಂದು ಗುರುತಿಸಲಾಗಿದೆ.

ವಿದ್ಯುತ್ ಕಂಬದ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *