Breaking
22 Mar 2026, Sun

ಟೀಮ್ ವೀರಕಂಭ ಆಶ್ರಯದಲ್ಲಿ ಆರನೇ ವರ್ಷದ “ಅಯೋಧ್ಯೆ ಟ್ರೋಪಿ” ಕ್ರಿಕೆಟ್ ಪಂದ್ಯಾಟ

ಕಲ್ಕಡ್ಕ : ಟೀಮ್ ವೀರಕಂಭ ಇದರ ಆಶ್ರಯದಲ್ಲಿ ಆರನೇ ವರ್ಷದ ಆಹ್ವಾನಿತ ಹತ್ತು ತಂಡಗಳ “ಅಯೋಧ್ಯೆ ಟ್ರೋಪಿ ‘ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ನಂದ ನಂದನತಿಮಾರ್ ಕ್ರಿಕೆಟ್ ಮೈದಾನದಲ್ಲಿ ಜ. 4 ರಂದು ನಡೆಯಿತು.

ವೀರಕಂಭ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರಾಮಚಂದ್ರ ಪ್ರಭು ಪಂದ್ಯಾಟವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಸಂದೀಪ್ ಪೂಜಾರಿ ಕೆಲಿಂಜ, ದಿನೇಶ್, ಪ್ರಮುಖರಾದ ಕೃಷ್ಣಪ್ಪ ಪೂಜಾರಿ ಕೆಪುಳಕೋಡಿ, ಜಯಪ್ರಕಾಶ್ ತೆಕ್ಕಿಪಾಪು, ಪ್ರಶಾಂತ್ ತೆಕ್ಕಿಪಾಪು, ರಮೇಶ್ ಕೇಪುಳಕೋಡಿ, ಟೀಮ್ ವೀರಕಂಭ ಪ್ರಮುಖರಾದ ಹರೀಶ್ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನಂತರ ನಡೆದ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ರಕ್ತೇಶ್ವರಿ ಸುಧೆಕಾರ್, ದ್ವಿತೀಯ ಸ್ಥಾನವನ್ನು ಟೀಮ್ ವೀರಕಂಬ, ತೃತೀಯ ಸ್ಥಾನವನ್ನು ಸಿದ್ಧಿವಿನಾಯಕ ತುಳಸಿವನ , ಚತುರ್ಥ ಸ್ಥಾನವನ್ನು ಶ್ರೀ ವಿಷ್ಣು ಪರಾಜೆ ತಂಡ ಪಡೆದುಕೊಂಡಿತು.

Leave a Reply

Your email address will not be published. Required fields are marked *