Breaking
22 Mar 2026, Sun

ಹಿಂದೂ ಧರ್ಮದ ಅಸ್ತಿತ್ವವೇ ರಾಷ್ಟ್ರದ ಅಸ್ತಿತ್ವ : ಅರ್ಕಕೀರ್ತಿ ಇಂದ್ರ

ಬಂಟ್ವಾಳ: ಹಿಂದೂ ಸಂಗಮ ಆಯೋಜನಾ ಸಮಿತಿ ಬಂಟ್ವಾಳ ಹಾಗೂ ಹಿಂದೂ ಸಂಗಮ ನಿರ್ವಹಣಾ ಸಮಿತಿ ಸಂಗಬೆಟ್ಟು ಮಂಡಲ ವತಿಯಿಂದ ಜ. 25 ರಂದು ಸಿದ್ದಕಟ್ಟೆಯಲ್ಲಿ ನಡೆಯಲಿರುವ ಹಿಂದೂ ಸಂಗಮದ ಕುರಿತು ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ  ಸಮಾಜ ಸುಧಾರಕ ಹಾಗೂ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಎಸ್. ಅರ್ಕಕೀರ್ತಿ ಇಂದ್ರ ಅವರು ಭಾರತದಲ್ಲಿ ಹಿಂದೂ ಧರ್ಮವನ್ನು ರಕ್ಷಣೆ ಮಾಡಿಕೊಂಡು, ದೇಶದ ಪರಂಪರೆಗಳನ್ನು ಕಾಪಾಡಿಕೊಂಡು ಹಿಂದೂ ಧರ್ಮದ ಅಸ್ತಿತ್ವದ ಆಧಾರದಲ್ಲಿ ರಾಷ್ಟ್ರದ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದಾಗಿದೆ. ನಮ್ಮ ರಾಷ್ಟ್ರದ ಅಸ್ತಿತ್ವದಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳು ಶಾಂತಿಯುತವಾದ ವಾತಾವರಣದಲ್ಲಿ ಮುನ್ನಡೆಯಲು ಸಾಧ್ಯ ಈ ನಿಟ್ಟಿನಲ್ಲಿ ಹಿಂದೂ ಧರ್ಮವನ್ನು ಆಚರಿಸುತ್ತಿರುವ ನಾವೆಲ್ಲರೂ ಜಾತಿ ಭೇದ ಮತ್ತು ಮೇಲು, ಕೀಳು ಎಂಬ ಭಾವನೆಯಿಂದ ಹೊರಬಂದು ರಾಷ್ಟ್ರ ಭಕ್ತಿಯೊಂದಿಗೆ ಹಿಂದೂ ಸಂಗಮದಲ್ಲಿ ಭಾಗಿಯಾಗೋಣ ಎಂದೂ ಕರೆ ನೀಡಿದರು.

ಬಂಟ್ವಾಳ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷರಾದ ಸುಬ್ರಮಣ್ಯ ಭಟ್ ಹಿಂದೂ ಸಂಗಮ ಕಾರ್ಯಕ್ರಮ ಮಹತ್ವದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಗಬೆಟ್ಟು ಮಂಡಲ ಹಿಂದೂ ಸಂಗಮ ನಿರ್ವಹಣಾ ಸಮಿತಿಯ ಸಂಯೋಜಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿಂದೂ ಸಂಗಮ ಸಮಿತಿಯ ಸಹ ಸಂಯೋಜಕ ದುರ್ಗಾದಾಸ್ ಶೆಟ್ಟಿ ಕರಿಂಕಿಜೆ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ, ಸಂಗಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಕುಲಾಲ್, ಹಿಂದೂ ಸಂಗಮ ನಿರ್ವಹಣಾ ಸಮಿತಿಯ ಪ್ರಮುಖರಾದ ರತ್ನಕುಮಾರ್ ಚೌಟ, ಸತೀಶ್ ಪೂಜಾರಿ ಅಲಕ್ಕೆ, ಸಂದೇಶ ಶೆಟ್ಟಿ ಪೋಡುಂಬ,ಗೋಪಾಲ ಗೌಡ ಕೊರ್ಯಾರು, ಪ್ರಭಾಕರ ಪ್ರಭು, ಯೋಗೀಶ್ ಆಚಾರ್ಯ,ಮೋಹನ್ ಜೀ ಮೂಲ್ಯ, ನೋಣಯ ಶೆಟ್ಟಿಗಾರ್, ಪ್ರವೀಣ್ ಪೂಜಾರಿ ಕುಪ್ಪೆಟ್ಟು, ಸುನೀಲ್ ಶೆಟ್ಟಿಗಾರ್, ಉಮೇಶ್ ಗೌಡ ,ಡಾ. ಶ್ರೀಧರ್ ಶೆಟ್ಟಿ,ಮಾದವ ಶೆಟ್ಟಿಗಾರ್ ಶಿವ ಗೌಡ, ವಿಶ್ವನಾಥ್ ಶೆಟ್ಟಿಗಾರ್, ದೀಪಕ್ ಶೆಟ್ಟಿಗಾರ್, ಪುರುಷೋತ್ತಮ್ ಭಂಡಾರಿ, ಕೆ. ಎನ್. ಶೆಟ್ಟಿಗಾರ್ ಸಂಗಬೆಟ್ಟು, ಕೃಷ್ಣಪ್ಪ ಪೂಜಾರಿ ಕರ್ಪೆ, ರಾಜೇಶ್ ಜಂಕಲ ಗಾಡಿಪಲ್ಕೆ , ಬಾಲಗೋಕುಲ ಮಾತಾಜಿ ಶುಭಲಕ್ಷ್ಮಿ, ಶಶಿಕಲಾ ಸರ್ವೋತ್ತಮ ಶೆಣೈ,ದೇವಿಪ್ರಸಾದ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

ಉದಯ ಶೆಟ್ಟಿಗಾರ್ ಸಂಗಬೆಟ್ಟು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *