Breaking
21 Mar 2026, Sat

ಶಾಲಾ ಅಡುಗೆ ಕೋಣೆಯಲ್ಲಿ ಬೆಂಕಿ ಅವಘಡ: ಅಡುಗೆ ನೌಕರಿ ಸಾವು

ಕಾಸರಗೋಡು: ಶಾಲಾ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಬೆಂಕಿ ತಗುಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತಪಟ್ಟವರನ್ನು ಉದ್ಯಾವರ ಮಾಡ ನಿವಾಸಿ ಜಯ(56) ಎಂದು ಗುರುತಿಸಲಾಗಿದೆ.

ಸುಮಾರು 20 ವರ್ಷಗಳಿಂದ ಕಾಸರಗೋಡು, ಬಂಗ್ರ ಮಂಜೇಶ್ವರ ಸರಕಾರಿ ಹೈಸ್ಕೂಲಿನ ಅಡುಗೆ ನೌಕರೆಯಾಗಿ ಕೆಲಸ ಮಾಡುತ್ತಿದ್ದ ಜಯ ಅವರು ಶಾಲೆಯ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿರುವ ಸಂದರ್ಭ ಬೆಂಕಿ ತಗುಲಿ ಜೋರಾಗಿ ಬೊಬ್ಬೆ ಹಾಕಿದ್ದಾರೆ. ಇವರ ಬೊಬ್ಬೆ ಕೇಳಿ ಸ್ಥಳಕ್ಕೆ ಧಾವಿಸಿದ ಅಧ್ಯಾಪಕರು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡ ಜಯ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *