Breaking
24 Jun 2026, Wed

ಎಲ್ಪೇಲು: 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಉದ್ಯಾಪನಾ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ: ತಾಲೂಕಿನ ಕುಕ್ಕಿಪಾಡಿ ಗ್ರಾಮದ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಟ್ರಸ್ಟ್‌ ರಿ. ಎಲ್ಪೇಲು ಇಲ್ಲಿ ಫೆ. 13 ರಿಂದ ಫೆ. 15 ವರೆಗೆ 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಉದ್ಯಾಪನಾ ಪೂಜೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯು ಜ.04 ರಂದು ಬಿಡುಗಡೆಗೊಂಡಿದೆ.ಹಲವು ಗಣ್ಯರ ಹಾಗೂ ಊರವರ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಫೆ.13ರಿಂದ ಶ್ರೀ ವೀರಭದ್ರ ಮಹಮ್ಮಾಯೀ ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ 3 ದಿನವೂ ವೈದಿಕ ಕಾರ್ಯಕ್ರಮಗಳು ನಡೆಯಲಿದ್ದು ಜೊತೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ, ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ನಿತ್ಯಾನಂದ ಪೂಜಾರಿ ಕೆಂತಲೆ, ಅಧ್ಯಕ್ಷರಾದ ಯೋಗೀಶ್ ಕೋಟ್ಯಾನ್ ಪಿಲಿಮೊಗರು ಗುತ್ತು, ಉಪಾಧ್ಯಕ್ಷರುಗಳಾದ ವೀರೇಂದ್ರ ಶೆಟ್ಟಿ ಕಂದಾವರ ಬಾಳಿಕೆ, ಸೀತಾರಾಮ ಶಾಂತಿ ಕಂಬಳದೋಡಿ, ಪ್ರಗತಿಪರ ಕೃಷಿಕ ಸೀತಪ್ಪ ಕೂಡೂರು, ರವೀಂದ್ರ ಪ್ರಭು ಅರಂತಾಡಿ, ಕಾರ್ತಿಕ್ ಭಟ್ ಕುಕ್ಕಿಪಾಡಿ, ನಾಗೇಶ ಸಪಲ್ಯ ಮೂದುಕುಮೇರು, ಸತ್ಯನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ಲಿಂಗಪ್ಪ ಪೂಜಾರಿ ಹಲಾಯಿ, ಉಪಾಧ್ಯಕ್ಷರಾದ ನಾರಾಯಣ ಶೆಟ್ಟಿ ಕುಕ್ಕೇಡಿ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸಾಲಿಯಾನ್, ಸತ್ಯನಾರಾಯಣ ಸೇವಾ ಸಮಿತಿಯ ಕೋಶಾಧಿಕಾರಿ ಯೋಗೀಶ್ ಆಚಾರ್ಯ ಎಲ್ಪೇಲು,ಮಹಿಳಾ ಸಮಿತಿಯ ಸಂಚಾಲಕಿ ಸುಜಾತ ಆರ್. ಪೂಜಾರಿ ಸುವರ್ಣ ಮಹೋತ್ಸವ ಸಮಿತಿಯ ಗೌರವ ಸಲಹೆಗಾರರುಗಳಾದ ರಮಾನಂದ ನಾಯಕ್ ಎಲ್ಪೇಲು, ಶಿವಪ್ಪ ಪೂಜಾರಿ ಕೊಂಡಬೆಟ್ಟು, ಓಬಯ್ಯ ಗೌಡ ಕುಕ್ಕೇಡಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಿರಿಯಪ್ಪ ಪೂಜಾರಿ ಕೋಡ್ಯೆಲು, ರತ್ನಾಕರ ಸಾಲ್ಯಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *