Breaking
24 Jun 2026, Wed

ವ್ಯಾಯಾಮಕ್ಕಾಗಿ ಮನೆಯೊಳಗೆ ಕಟ್ಟಿದ್ದ ಹಗ್ಗಕ್ಕೆ ಸಿಲುಕಿ ಬಾಲಕಿ ಸಾವು

ಕೇರಳ: ವ್ಯಾಯಾಮಕ್ಕಾಗಿ ಮನೆಯೊಳಗೆ ಕಟ್ಟಿದ್ದ ಹಗ್ಗಕ್ಕೆ ಸಿಲುಕಿ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಕೇರಳ ಜಿಲ್ಲೆಯ ಪಾಲಕ್ಕಾಡ್ ಜಿಲ್ಲೆಯ ಕುಟ್ಟನಾಡ್ ಪುಲಿಕಲ್ಲ್ ಎಂಬಲ್ಲಿ ನಡೆದಿದೆ.

ಅಲಿಮೋನ್ ಅವರ ಪುತ್ರಿ ಆಯೇಷಾ ಹಿಫಾ (11) ಮೃತಪಟ್ಟ ಬಾಲಕಿಯಾಗಿದ್ದಾಳೆ.

ಮಗುವಿನ ತಾಯಿ ಮತ್ತು ಸಹೋದರಿ ಹೊರಗೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಆ ಸಮಯದಲ್ಲಿ ಮಗುವಿನ ಅಜ್ಜಿ ಮಾತ್ರ ಮನೆಯಲ್ಲಿದ್ದು, ಮಗು ಕಾಣೆಯಾದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಹಗ್ಗದಲ್ಲಿ ಹಿಫಾ ಸಿಕ್ಕಿಬಿದ್ದಿದ್ದಳು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವಳ ಪ್ರಾಣ ಉಳಿಸಲಾಗಲಿಲ್ಲ.

ಎತ್ತರವನ್ನು ಹೆಚ್ಚಿಸುವ ವ್ಯಾಯಾಮಕ್ಕಾಗಿ ಅಡುಗೆ ಮನೆಯಲ್ಲಿ ಕಟ್ಟಿದ ಹಗ್ಗದಲ್ಲಿ ನೇತಾಡುತ್ತಿದ್ದಾಗ ಸಾವು ಸಂಭವಿಸಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *