Breaking
22 Mar 2026, Sun

ಶಿಕ್ಷಕ ವಿ.ರಾಧಾಕೃಷ್ಣ ವರ್ಮರಿಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದಿಂದ ಸನ್ಮಾನ

ಬಂಟ್ವಾಳ: ತಾಲೂಕಿನ ವಿಟ್ಲದ ಕಾರಡ್ಕಬೀಡು ಶ್ರೀ.ಕೆ. ಪದ್ಮನಾಭಯ್ಯ ಬಲ್ಲಾಳ್ ಮತ್ತು ವಿಟ್ಲ ಅರಮನೆ ಲಕ್ಷ್ಮೀ ಅಮ್ಮ ದಂಪತಿಗಳ ಮಗ ಸಾಹಿತಿ ಶಿಕ್ಷಕ ವಿ. ರಾಧಾಕೃಷ್ಣ ವರ್ಮಾರವರನ್ನು ಡಿ. 31 ರಂದು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮೇಗಿನಪೇಟೆ, ವಿಟ್ಲದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೇಂದ್ರ ಸಮಿತಿ ಬೆಂಗಳೂರು (ರಿ.) ಪುತ್ತೂರು ಘಟಕದಿಂದ ಸನ್ಮಾನಿಸಿ ಗೌರವಿಸಲಾಯಿತು.

ವಿ. ರಾಧಾಕೃಷ್ಣ ವರ್ಮಾರವರು ಪುತ್ತೂರು ತಾಲೂಕಿನ ಸಬಳೂರು ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ಆರಂಭಿಸಿದ್ಧು ಕಂಬಳಬೆಟ್ಟು ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು . ಪ್ರಸ್ತುತ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮೇಗಿನಪೇಟೆಯಲ್ಲಿ ಸೇವೆ ಸಲ್ಲಿಸಿ ಡಿ. 31 ರಂದು ನಿವೃತ್ತರಾಗಿದ್ದಾರೆ.

ಸುಮಾರು 29 ವರ್ಷಗಳ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಅಳಿಕೆ ಗ್ರಾಮದ ಎರುಂಬುವಿನಲ್ಲಿ ಪತ್ನಿ ವರಲಕ್ಷ್ಮಿ ಮತ್ತು ಮಕ್ಕಳು ಮೊಮ್ಮಕ್ಕಳೊಂದಿಗೆ ವಾಸ್ತವ್ಯ ಹೊಂದಿದ್ದಾರೆ.

ಕಾರ್ಯಕ್ರಮದಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮೇಗಿನಪೇಟೆ ಮುಖ್ಯ ಶಿಕ್ಷಕಿ ಜಯಂತಿ ಸ್ವಾಗತಿಸಿದರು. ಹಿರಿಯ ಸಾಹಿತಿ ಪತ್ರಕರ್ತ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಗೌರವಾಧ್ಯಕ್ಷ ಶ್ರೀ ಜಯಾನಂದ ಪೆರಾಜೆ ಅಭಿನಂದನಾ ನುಡಿಗಳನ್ನಾಡಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷೆ ಸಾಹಿತಿ ಶಿಕ್ಷಕಿ ಡಾ. ಶಾಂತಾ ಪುತ್ತೂರು ಸನ್ಮಾನಿಸಿ ಧನ್ಯವಾದವಿತ್ತರು. ಶಿಕ್ಷಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷೆ ಆಶಾ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಶಿಕ್ಷಕಿಯರಾದ ಸವಿತಾ, ಪ್ರಮೀಳಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *