Breaking
6 May 2026, Wed

ಕರ್ನಾಟಕ ದ್ವೇಷ ಭಾಷಣ ಮತ್ತು ಅಪರಾಧಗಳ ಮಸೂದೆ-2025 ಅಂಗೀಕರಿಸದಂತೆ ಮನವಿ: ಪ್ರಭಾಕರ ಪ್ರಭು

ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರವು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಶಾಸಕರುಗಳ ವಿರೋಧದ ನಡುವೆಯೂ ಯಾವುದೇ ಚರ್ಚೆಗೆ ಅವಕಾಶ ನೀಡದೇ ಗೊಂದಲದ ಮಧ್ಯೆ ವಿಧಾನ ಸಭೆ ಮತ್ತು ವಿಧಾನ ಪರಿಷತ್ತ್ ನಲ್ಲಿ ಏಕ ಪಕ್ಷೀಯವಾಗಿ ಅಂಗೀಕರಿಸಲಾದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆ-2025 ಇದೊಂದು ರಾಜ್ಯದ ಬಹುಪಾಲು ಜನತೆಯ ಮುಕ್ತ ಅಭಿಪ್ರಾಯಗಳು ಮತ್ತು ಮೂಲ ಆಶಯಗಳಿಗೆ ವಿರುದ್ದವಾಗಿರುತ್ತದೆ.

ಜನ ಸಾಮಾನ್ಯರ ಮಾತಾನಾಡುವ ಸ್ವಾತಂತ್ರ್ಯವನ್ನು ಕಸಿದು ಕೊಂಡತಾಗಿದ್ದು , ವ್ಯವಸ್ಥೆಯಲ್ಲಿನ ತಪ್ಪುಗಳನ್ನು ಪ್ರಶ್ನಿಸುವ ವ್ಯಕ್ತಿಯ ಸಂವಿಧಾನಿಕ ಹಕ್ಕನ್ನು ಮೊಟಕುಗೊಳಿಸಲಾಗಿದೆ. ಒಟ್ಟಿನಲ್ಲಿ ಬಹುಸಂಖ್ಯಾತ ಜನರಿಗೆ ಇಂತಹ ಮಸೂದೆಯ ಮೂಲಕ ಕಟ್ಟಿ ಹಾಕುವಂತಹ ಅಸಂಬದ್ದ ರೀತಿಯ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆ-2025 ರನ್ನು ತಿರಸ್ಕರಿಸಿ , ಅಂಗೀಕರಿಸದಂತೆ ಬೆಂಗಳೂರು ರಾಜಭವನದ ಕರ್ನಾಟಕ ಮಾನ್ಯ ಘನವೆತ್ತ ರಾಜ್ಯಪಾಲರಲ್ಲಿ ದಕ್ಷಿಣ ಕನ್ನಡ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ವಿನಂತಿಸಿಕೊಂಡಿದ್ದಾರೆ .

Leave a Reply

Your email address will not be published. Required fields are marked *