Breaking
19 Sep 2026, Sat

ಆಕಸ್ಮಿಕ ಬೆಂಕಿ ಅವಘಡ: ವಿಟ್ಲದ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ವಿಟ್ಲ: ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ವಿಟ್ಲ ಮಂಗಳೂರು ರಸ್ತೆಯಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ನಡೆದಿದೆ.

ಸಂತೋಷ್ ಕುಮಾರ್ ಕೊಡಂಗೆ ಅವರ ಮಾಲಕತ್ವದ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಮೊದಲು ಬೆಂಕಿ ಕಾಣಿಸಿ ಕೊಂಡಿದ್ದು ಅಂಗಡಿಯೊಳಗಿದ್ದ ಎಲೆಕ್ಟ್ರಾನಿಕ್ ಉಪಕರಣಗಳಿಗೆ ವೇಗವಾಗಿ ಬೆಂಕಿ ಹಬ್ಬಿದ ಪರಿಣಾಮ ಜ್ವಾಲೆಯ ತೀವ್ರತೆ ಹೆಚ್ಚಾಗಿ ಪಕ್ಕದಲ್ಲಿದ್ದ ಸಣ್ಣಪುಟ್ಟ ಅಂಗಡಿಗಳಿಗೂ ಬೆಂಕಿ ಆವರಿಸಿದೆ.

ಬೆಂಕಿಯ ಕೆನ್ನಾಲಗೆಯು ಸಮೀಪದ ಅಮಿತ್ ಹೋಟೆಲ್ ವರೆಗೂ ವಿಸ್ತರಿಸಿದ್ದು ಸ್ಟಾರ್ ವೈನ್ಸ್ ಹಾಗೂ ಇದರ ಮಧ್ಯೆದಲ್ಲಿದ್ದ ಎಸ್. ಬಿ. ಟೈಲರಿಂಗ್ ಶಾಪ್, ಪಡೀಲ್ ಪಾಸ್ಟ್ ಫುಡ್, ಸಹಿತ ಸಣ್ಣ ಅಂಗಡಿಗಳೂ ಬೆಂಕಿಗೆ ಆಹುತಿಯಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿ ಬೆಂಕಿಯನ್ನು ನಂದಿಸುವುದಕ್ಕೆ ಹರಸಾಹಸ ಪಟ್ಟಿದ್ದಾರೆ.

Leave a Reply

Your email address will not be published. Required fields are marked *