Breaking
22 Mar 2026, Sun

ಪೌರ ಕಾರ್ಮಿಕರ ಸ್ವಚ್ಛತಾ ಸೇವೆ ರಾಷ್ಟ್ರ ಸೇವೆ ಮತ್ತು ದೇವತಾ ಕಾರ್ಯಕ್ಕೆ ಸಮಾನ : ಪ್ರಭಾಕರ ಪ್ರಭು

ಬಂಟ್ವಾಳ: ಸತ್ಯದೇವತಾ ಸಭಾಂಗಣ ಕಣಪಾದೆಯಲ್ಲಿ ಮಾತೃಭೂಮಿ ಸೇವಾ ಸಂಘ ‌ನಾವೂರು ಇದರ ದ್ವೀತಿಯ ವರುಷದ ವಾರ್ಷಿಕೋತ್ಸವ ಹಾಗೂ ಪೌರ ಕಾರ್ಮಿಕರನ್ನು ಗೌರವಿಸುವ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮದಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ಅವರು ದೇಶದಲ್ಲಿರುವ ನಗರಾಡಳಿತ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ಸೇವೆ ರಾಷ್ಟ್ರ ಸೇವೆಗೆ ಮತ್ತು ದೇವತಾ ಕಾರ್ಯಕ್ಕೆ ಸಮಾನ ವಾಗಿದ್ದು,ಯಾವುದೇ ತೊಡಕುಗಳಿಲ್ಲದೇ ಅತ್ಯಂತ ಸ್ವಚ್ಛಂದವಾಗಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಈ ವರ್ಷದಲ್ಲಿ ಜರಗಿದ ಮಹಾ ಕುಂಭಮೇಳ ಸಾಕ್ಷೀಯಾಗಿದ್ದು ಇಲ್ಲಿ ಪೌರ ಕಾರ್ಮಿಕರ ಸೇವೆಯೇ ನಿದರ್ಶನವಾಗಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸ್ವಾತಂತ್ರ ಹೋರಾಟಗಾರ ವೀರ ಸಾವರ್ಕರ್ ರವರ ಜೀವನ ಚರಿತ್ರೆಯನ್ನು ಉಪನ್ಯಾಸ ಮೂಲಕ ಸಮಾಜಕ್ಕೆ ನೀಡಿ, ಸೇವಕರಿಗೆ ಗೌರವಿಸುವಲ್ಲಿ ಮಾತೃ ಭೂಮಿ ಸೇವಾ ಸಂಘ ನಾವೂರು ಜೆಲ್ಲೆಯ ಸಂಘ ಸಂಸ್ಥೆ ಗಳಿಗೆ ಮಾದರಿ ಯಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಸಮಾಜ ಸೇವಕರಾದ ರವಿ ಕಟಪಾಡಿ ಹಾಗೂ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾದ ಅರ್ಜುನ್ ಭಂಡಾರ್ಕರ್ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದರು.

ಸಾಮಾಜಿಕ ಮುಖಂಡರು ಖಾಲಿದ್ ನಂದಾವರ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಅಶ್ವಥ್ ಬರಿಮಾರು ಸಾರ್ವಕರ್ ಹಾಗೂ ರಾಷ್ಟ್ರೀಯತೆ ವಿಷಯದ ವಿಚಾರ ಮಂಡನೆ ಮಾಡಿದರು.

ಗಣೇಶ್ ಯುವ ಶಕ್ತಿ ಸೇವಾಪಥ ಇವರು ಅತಿಥಿಯಾಗಿದ್ದು ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ, ಸತ್ಯ ದೇವತೆ ಗೆಳೆಯರ ಬಳಗ ಕಣಪಾದೆಯ ಅಧ್ಯಕ್ಷರಾದ ಸದಾನಂದ ಹಳೆಗೇಟು, ಮಾತೃಭೂಮಿ ಸಂಘದ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಎಕ್ಕುಡೇಲು ಹಾಗೂ ಪಂಚಾಯತ್ ಸದಸ್ಯರಾದ ವಿಜಯ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪೌರ ಕಾರ್ಮಿಕರ ಜೊತೆಗೆ ಮಾಜಿ ಸೈನಿಕರನ್ನು ಹಾಗೂ ಸಮಾಜ ಸೇವಕರನ್ನು ವೈದ್ಯರು ಹಾಗೂ ದಾದಿಯರನ್ನು ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸತ್ಯ ದೇವತೆ ನೃತ್ಯ ಕಲಾ ತಂಡದ ವತಿಯಿಂದ ಮಾತೃಭೂಮಿಗೆ ನಮನ ಕಾರ್ಯಕ್ರಮ ಹಾಗೂ ಸ್ಪಂದನ ಕಲಾವಿದರ್ ಬಂಟ್ವಾಳ ಇವರಿಂದ ಜಾಗೃತಿಯ ಸಂದೇಶ ಸಾರುವ ಸಾದಿ ತಿಕ್ಕುಜಿ ನಾಟಕ ಪ್ರದರ್ಶನಗೊಂಡಿತು.

ಜಗದೀಶ್ ‌ಕಕ್ಕಿಂಜಿ ಇವರು ಪ್ರಾರ್ಥಿಸಿ, ಸಂಘ ನಿರ್ದೇಶಕರಾದ ಸುರೇಶ್. ಎಸ್ ನಾವೂರು ಸ್ವಾಗತಿಸಿ ಕಾರ್ಯದರ್ಶಿ ‌ಲೋಹಿತ್ .ಕೆ.ವಂದಿಸಿದರು. ಎಂ.ಕೆ.ಕನ್ಯಾಡಿ ನಿರೂಪಿಸಿದರು.

Leave a Reply

Your email address will not be published. Required fields are marked *