Breaking
23 Mar 2026, Mon

ಸ್ಕೂಟರ್‌ಗೆ ರಿಕ್ಷಾ ಡಿಕ್ಕಿ ಹೊಡೆದು ಪರಾರಿಯಾಗಿದ್ದ ರಿಕ್ಷಾ ಚಾಲಕನ ಬಂಧನ

ಬಂಟ್ವಾಳ : ಸ್ಕೂಟರ್ ಗೆ ರಿಕ್ಷಾ ಡಿಕ್ಕಿ ಹೊಡೆದು ಪರಾರಿಯಾಗಿದ್ದ ರಿಕ್ಷಾ ಚಾಲಕನನ್ನು ಬಂಟ್ವಾಳ ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಬಂಧಿತನನ್ನು ರಿಕ್ಷಾ ಚಾಲಕ ಸಜೀಪ ನಿವಾಸಿ ಕುಮರೇಶ್ ಎಂದು ಗುರುತಿಸಲಾಗಿದೆ.

ಉಸ್ಮಾನ್ ಎಂಬವರ ಸ್ಕೂಟರ್ ಗೆ ಅಪರಿಚಿತ ರಿಕ್ಷಾ ಡಿಕ್ಕಿ ಹೊಡೆದು ಬಳಿಕ ರಿಕ್ಷಾ ಚಾಲಕ ಪರಾರಿಯಾಗಿದ್ದ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ರಿಕ್ಷಾ ಚಾಲಕ ಪರಾರಿಯಾದುದನ್ನು ಸ್ಥಳೀಯರು ಗಮನಿಸಿದ್ದು, ಸಿ.ಸಿ.ಕ್ಯಾಮರಾದ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಿದ ಬಂಟ್ವಾಳ ಟ್ರಾಫಿಕ್ ಪೊಲೀಸರು ಡಿ. 24ರಂದು ಮಂಗಳೂರಿನಲ್ಲಿ ರಿಕ್ಷಾವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *