ಬಂಟ್ವಾಳ: ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಸೇವಾ ಟ್ರಸ್ಟ್(ರಿ.) ನೆಕ್ಕರೆಗುಳಿ ಕರ್ಪೆ ಇವರ ಆಶ್ರಯದಲ್ಲಿ ಶ್ರೀ ಅಯ್ಯಪ್ಪ ಪೂಜೋತ್ಸವ ಹಾಗೂ ಶ್ರೀ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟವು ಜ. 4 ರಂದು ನಡೆಯಲಿದೆ.

ಡಿ. 4 ರಂದು ಬೆಳಿಗ್ಗೆ 7 ಗಂಟೆಗೆ ಶ್ರೀ ಸ್ವಾಮಿಯ ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆಯಲಿದ್ದು, ಮದ್ಯಾಹ್ನ 12.30 ಕ್ಕೆ ಶ್ರೀ ಸ್ವಾಮಿಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ವಿದ್ಯುದ್ದೀಪಾಲಂಕೃತವಾದ ಭವ್ಯ ರಂಗ ಮಂಟಪದಲ್ಲಿ ಮಾತರಂಗ ಕನ್ಯೆ ಎಂಬ ಪುಣ್ಯ ಕಥಾಭಾಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಡಿ. 5 ರಂದು ಬೆಳಿಗ್ಗೆ ಸ್ವಾಮಿಗಳು ಶ್ರೀ ಸ್ವಾಮಿಯ ಇರುಮುಡಿ ಹೊತ್ತು ಸ್ವಾಮಿಯ ದರ್ಶನಕ್ಕೆ ಹೊರಡಲಿದ್ದಾರೆ. ಸಂಜೆ 4 ಗಂಟೆಗೆ ಕುಟ್ಟಿಕಳ ಶಾಲೆಯಿಂದ ಶ್ರೀ ದೇವರ ಶೋಭಾಯಾತ್ರೆಯು ನಡೆಯಲಿದ್ದು ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



