ಕೇರಳ: ಎರ್ನಾಕುಲಂನ ದಕ್ಷಿಣ ಪರವೂರಿನಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಯುವಕನಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣ ಉಳಿಸಿರುವ ಘಟನೆ ಡಿ. 21 ರಂದು ನಡೆದಿದೆ.

ಮೂರು ಮಂದಿ ವೈದ್ಯರು ಚರ್ಚ್ ಗೆ ತೆರಳುತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿರಲಿಲ್ಲ. ಆದರೆ ಇನ್ನೊಬ್ಬ ಕೊಲ್ಲಂನ ನಿವಾಸಿ, ಲಿನು ಗಂಭೀರ ಸ್ಥಿತಿಯಲ್ಲಿರುವುದನ್ನು ಕಂಡು ಗಾಯಗೊಂಡ ಯುವಕ ಆಸ್ಪತ್ರೆ ತಲುಪುವಷ್ಟರಲ್ಲಿ ಬದುಕುಳಿಯುವುದಿಲ್ಲ ಎಂದು ಅರಿತ ವೈದ್ಯರಾದ ಮನೂಪ್, ಡಾ.ಥಾಮಸ್ ಪೀಟರ್ ಮತ್ತು ಅವರ ಪತ್ನಿ ಡಾ.ದಿಧಿಯಾ ತುರ್ತು ಶಸ್ತ್ರಚಿಕಿತ್ಸೆ ನಡೆಸಿ, ಪ್ರಾಣ ಉಳಿಸಿದ್ದಾರೆ.

ಅಪಘಾತದಲ್ಲಿ ಆದ ಗಾಯದ ನಂತರ ರಕ್ತ ಮತ್ತು ಕೊಳಕು ಶ್ವಾಸಕೋಶಕ್ಕೆ ಪ್ರವೇಶಿಸಿ ಉಸಿರಾಟದ ತೊಂದರೆ ಉಂಟಾಗಿದ್ದರಿಂದ ವೈದ್ಯರು ಚಿಕಿತ್ಸೆ ನಡೆಸಲು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ.



