Breaking
23 Mar 2026, Mon

ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಅಂತಿಮ ಫಲಿತಾಂಶ : 3 ವಿಭಾಗದ ಕೋಣಗಳಿಗೆ ಸಮಾನ ಬಹುಮಾನ

ಬಂಟ್ವಾಳ: ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಡಿ. 21ರಿಂದ ಆರಂಭಗೊಂಡು ಡಿ.22ರಂದು ಅಂತಿಮಗೊಂಡಿದ್ದು, ಫೈನಲ್‌ ಹಂತವು ರೋಚಕವಾಗಿ ಮೂಡಿ ಬಂದಿದೆ.

ಹೊಕ್ಕಾಡಿಗೋಳಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ನಡೆದ ಈ ಕಂಬಳ ಕೂಟದಲ್ಲಿ ಒಟ್ಟು 165 ಕೋಣಗಳು ಭಾಗವಹಿಸಿದ್ದು ಕನಹಲಗೆ 6, ನೇಗಿಲು ಕಿರಿಯ 78, ಹಗ್ಗ ಕಿರಿಯ 25, ಅಡ್ಡ ಹಲಗೆ 9, ನೇಗಿಲು ಹಿರಿಯ 31, ಹಗ್ಗ ಹಿರಿಯ 19 ಕೋಣಗಳು ಪಾಲ್ಗೊಂಡಿದ್ದವು.

ಅಡ್ಡ ಹಲಗೆ ವಿಭಾಗ:
ನಾರ್ಯ ಗುತ್ತು ಕುವೆತ್ತಬೈಲು ಸಂತೋಷ್ ರೈ ಬೊಳ್ಯಾರು
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
ಇರುವೈಲು ದೊಡ್ಡಗುತ್ತು ಜಗದೀಶ್ ಎಂ ಶೆಟ್ಟಿ ‘ಎ’
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ ಕೋಣಗಳು ಸಮಾನ ಬಹುಮಾನ ಮುಡಿಗೇರಿಸಿಕೊಂಡಿದೆ.

ನೇಗಿಲು ಕಿರಿಯ ವಿಭಾಗ:
ಮುನಿಯಾಲು ಉದಯ ಕುಮಾರ್ ಶೆಟ್ಟಿ
ಓಡಿಸಿದವರು : ಬಾರಾಡಿ ನತೀಶ್ ಸಫಲಿಗ
ಅನಂತಾಡಿ ವೈಶಾಖ್ ವೈಭವ್ ಮಡಿವಾಳ
ಓಡಿಸಿದವರು: ಭಟ್ಕಳ ಶಂಕರ್ ಸಮಾನ ಬಹುಮಾನ ಪಡೆದುಕೊಂಡಿದ್ದಾರೆ.

ನೇಗಿಲು ಹಿರಿಯ ವಿಭಾಗ:
ಪ್ರಥಮ: ಮಾಣಿ ಹರೀಶ್ ಶೆಟ್ಟಿ “ಎ” (11.76)
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
ದ್ವಿತೀಯ: ಬೆಳ್ಳಿಪ್ಪಾಡಿ ಕೈಪ ಕೇಶವ ಮಂಕು ಭಂಡಾರಿ “ಎ” (11.91)
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ಹಗ್ಗ ಕಿರಿಯ:
ಪ್ರಥಮ: ಉಡುಪಿ ಕೊರಂಗ್ರಪಾಡಿ ಪಡುಮನೆ ವೀರ್ ಕರ್ಣ ಪ್ರಭಾಕರ ಹೆಗ್ಡೆ (11.79)
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ “ಬಿ” (11.86)
ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ

ಹಗ್ಗ ಹಿರಿಯ:
ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ
ಓಡಿಸಿದವರು : ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

ಲೊರೆಟ್ಟೊ ಮಹಲ್ ತೋಟ ಆನ್ಯ ಅನಿಲ್ ಮಿನೇಜಸ್
ಓಡಿಸಿದವರು :ಬೈಂದೂರು ವಿಶ್ವನಾಥ ದೇವಾಡಿಗ ಸಮಾನ ಬಹುಮಾನ ಪಡೆದುಕೊಂಡಿದ್ದಾರೆ.

ಫೈನಲ್‌ ಹಂತದಲ್ಲಿ 3 ವಿಭಾಗದ ಕೋಣಗಳು ಸಮ-ಸಮ ಬಹುಮಾನ ಪಡೆದುಕೊಂಡು ಮತ್ತೊಂದು ಇತಿಹಾಸ ನಿರ್ಮಿಸಿದೆ.

Leave a Reply

Your email address will not be published. Required fields are marked *