Breaking
23 Mar 2026, Mon

ನಿಯಂತ್ರಣ ತಪ್ಪಿ ಶಾಲಾ ಮಕ್ಕಳಿದ್ದ ಜೀಪ್‌ ಪಲ್ಟಿ

ಚಿಕ್ಕಮಗಳೂರು : ನಿಯಂತ್ರಣ ತಪ್ಪಿ ಶಾಲಾ ಮಕ್ಕಳಿದ್ದ ಜೀಪೊಂದು ಪಲ್ಟಿಯಾದ ಘಟನೆ ಡಿ.22 ರಂದು ಮುಳ್ಳಯನಗಿರಿಯಲ್ಲಿ ನಡೆದಿದೆ.

ಕೇರಳ ಮೂಲದ ಶಾಲೆಯೊಂದರ ವಿದ್ಯಾರ್ಥಿಗಳು ಟ್ರಾವೆಲ್‌ ಏಜೆನ್ಸಿ ಮೂಲಕ ಮುಳ್ಳಯನಗಿರಿಗೆ ಪ್ರವಾಸಕ್ಕೆ ಬಂದಿದ್ದು, ವಿದ್ಯಾರ್ಥಿಗಳನ್ನು ಜೀಪ್‌ ಮೂಲಕ ಕರೆದೊಯ್ಯತ್ತಿರುವಾಗ ಚಾಲಕನ ವೇಗಕ್ಕೆ ನಿಯಂತ್ರಣ ತಪ್ಪಿದ ಜೀಪ್‌ ರಸ್ತೆಯಲ್ಲಿ ಪಲ್ಟಿಯಾಗಿದೆ. ಪರಿಣಾಮ ಆರು ಮಂದಿ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *