Breaking
26 Sep 2026, Sat

21ನೇ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ಶಿಪ್‌ನಲ್ಲಿ ಪೂರ್ವಿ ಜೆ ಬಂಗೇರ ಕಟಾದಲ್ಲಿ ಪ್ರಥಮ ಸ್ಥಾನ ಹಾಗೂ ಕುಮಿತೆಯಲ್ಲಿ ದ್ವಿತೀಯ ಸ್ಥಾನ

ಬಂಟ್ವಾಳ: ಮಂಗಳೂರು ಫಾದರ್ ಮುಲ್ಲರ್ ಇಂಡೋರ್ ಸ್ಟೇಡಿಯಂ, ಕಂಕನಾಡಿಯಲ್ಲಿ ನಡೆದ 21ನೇ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ಶಿಪ್–2025ರಲ್ಲಿ 14 ವರ್ಷದ ಬಾಲಕಿಯರ ವಿಭಾಗದಲ್ಲಿ ಪೂರ್ವಿ ಜೆ. ಬಂಗೇರ ದಾಸಕೋಡಿ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ.

ಕರಾಟೆಯ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಪ್ರಶಸ್ತಿ ಗಳಿಸಿದ್ದಾರೆ.

ಪೂರ್ವಿ ಜೆ ಬಂಗೇರ ಅವರು ಬೊಂಡಾಲ ಶ್ರೀ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ಸಮೀಕ್ಷಾ ಅವರು ಕರಾಟೆಯ ಗುರುಗಳಾಗಿದ್ದಾರೆ. ಇವರು ಜಯ ಗಣೇಶ್ ಬಂಗೇರ ದಾಸಕೋಡಿ ಮತ್ತು ಜಯಶ್ರೀ ಜೆ ಬಂಗೇರ ದಂಪತಿಗಳ ಸುಪುತ್ರಿ.

Leave a Reply

Your email address will not be published. Required fields are marked *