ಬಂಟ್ವಾಳ: PGRSS ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದ ಎಲ್ಲಾ ತಾಯಂದಿರ ಸಮ್ಮುಖದಲ್ಲಿ ಪ್ರತಿ ಹನಿ ಅವಶ್ಯ ಪ್ರತಿ ಮಗು ಅಮೂಲ್ಯ ಎಂಬ ಘೋಷವಾಕ್ಯದೊಂದಿಗೆ ಪಲ್ಸ್ ಪೋಲಿಯೋ ಅಭಿಯಾನ ಕಾರ್ಯಕ್ರಮವನ್ನು ಡಿ. 21 ರಿಂದ 24 ರಂದು ಹಮ್ಮಿಕೊಳ್ಳಲಾಯಿತು.

ಡಿ. 21 ರಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆ ತನಕ ಬೂತ್ ಚಟುವಟಿಕೆಯಲ್ಲಿ ಲಸಿಕೆ ನಡೆಯಲಿದ್ದು, ಡಿ. 22 ರಿಂದ 24 ರ ವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಕಾರ್ಯ ನಡೆಯಲಿದೆ.
ಈ ಪೋಲಿಯೋ ಲಸಿಕೆ ಅಭಿಯಾನದ ಕಾರ್ಯಕ್ರಮಕ್ಕೆ ತಂದೆ ತಾಯಂದಿರು ತಪ್ಪದೆ ತಮ್ಮ ಐದು ವರ್ಷದ ಒಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆಯನ್ನ ಹಾಕಿಸಬೇಕೆಂದು ಮನವಿ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ PGRSS ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದ ರಾಜ್ಯ ಸಂಚಾಲಕರಾದ ರಕ್ತದಾನಿ ಮಂಜು, ಕಂಪ್ಯೂಟರ್ ಆಪರೇಟರ್ ಹರಿಣಿ ಮತ್ತು ಎಲ್ಲಾ ತಾಯಂದಿರು ಉಪಸ್ಥಿತರಿದ್ದರು.




