Breaking
10 May 2026, Sun

ಇಂದಬೆಟ್ಟುವಿನಲ್ಲಿ ದನದ ಕೊಟ್ಟಿಗೆ ಹಾಗೂ ರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕ ತಗುಲಿದ ಬೆಂಕಿ: ಅಪಾರ ಹಾನಿ

ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ತುರ್ಕರೆಬೆಟ್ಟು ರಾಜೇಶ್ ಬಿನ್ ಉರ್ಮಿಶ್ ರವರ ದನದ ಹಟ್ಟಿ, ಕೊಟ್ಟಿಗೆ ಹಾಗೂ ರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕ ಬೆಂಕಿ ತಗುಲಿ ಕೊಟ್ಟಿಗೆ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ತಡರಾತ್ರಿ ಸುಮಾರು 12.30 ರ ವೇಳೆಗೆ ನಡೆದಿದೆ.

ಸ್ಥಳಿಯರ ತಕ್ಷಣದ ಸಹಕಾರದಿಂದ ಹಟ್ಟಿಯಲ್ಲಿ ಕಟ್ಟಿದ್ದ ದನ ಹಾಗೂ ಕರುವನ್ನು ರಕ್ಷಿಸಲಾಗಿದ್ದು ನೀರು ಹಾಕಿ ಬೆಂಕಿಯನ್ನು ನಂದಿಸಲಾಗಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಕೊಟ್ಟಿಗೆಯಲ್ಲಿದ್ದ ರಬ್ಬರ್ ಸೀಟ್, ಅಡಿಕೆ ಹಾಗೂ ಕೃಷಿ ಸಂಬಂಧಿತ ಉಪಕರಣಗಳು, ಮೇಲ್ಚಾವಣಿ ಸುಟ್ಟು ಹೋಗಿದೆ.

ಘಟನಾ ಸ್ಥಳಕ್ಕೆ ಇಂದಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆಶಾಲತಾ, ಸದಸ್ಯರಾದ ಶ್ರೀಕಾಂತ್ ಎಸ್, ಸುಮಿತ್ರಾ, ಪಂಚಾಯತ್ ಕಾರ್ಯದರ್ಶಿ ಗಿರಿಯಪ್ಪ ಗೌಡ, ಕಂದಾಯ ಇಲಾಖೆ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *