Breaking
26 Sep 2026, Sat

ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ: ಆರೋಪಿ ಅರೆಸ್ಟ್

ಕಾಸರಗೋಡು : ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯೋವ೯ನನ್ನು ಪೊಲೀಸರು ಉದುಮ ಸಮೀಪದ ಕಿಯಿಚ್ಚಿಲ್ ಎ೦ಬಲ್ಲಿ ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಕೂಡ್ಲು ಗ್ರಾಮದ ಚೌಕಿ ಆಜಾದ್‌ ನಗರದ ನಿವಾಸಿ ಅಹ್ಮದ್ ಎಂ ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಸುಮಾರು 1,100ಕಿಲೋ ಗಾಂಜಾ ಹಾಗೂ ಆಟೋ ರಿಕ್ಷಾ ವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *